ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ

Public TV
2 Min Read
PM Modi in nigeria 1

ಅಬುಜಾ: ನೈಜೀರಿಯಾ (Nigeria) ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ನೈಜೀರಿಯಾ ಸರ್ಕಾರ (Nigeria Government) ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ ನೀಡಿ ಅಭಿನಂದಿಸಿದೆ.

PM Modi in nigeria 3

ನೈಜೀರಿಯಾದ ಎರಡನೇ ಅತ್ಯುನ್ನತ ಪುರಸ್ಕಾರ `ದಿ ಗ್ರ‍್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (The Grand Commander of The Order of the Niger) ನೀಡಿ ಗೌರವಿಸಿದೆ. ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡುತ್ತಿರುವ 17ನೇ ಅಂತರರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಕಲ್ಲಾಸ್‌

ಪ್ರಧಾನಿ ಮೋದಿ ಈ ಪ್ರಶಸ್ತಿ ಪಡೆದುಕೊಂಡು 2ನೇ ಗಣ್ಯರಾಗಿದ್ದಾರೆ. ಇದಕ್ಕೂ ಮುನ್ನ ರಾಣಿ ಎಲಿಜಬೆತ್ ಅವರು 1969ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಐದು ದಿನಗಳ ಪ್ರವಾಸದಲ್ಲಿರುವ ಮೋದಿ ಭಾನುವಾರ (ನ.17) ನೈಜೀರಿಯಾಕ್ಕೆ ಬಂದಿಳಿದಿದ್ದು, ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

PM Modi in nigeria

ನೈಜರೀಯಾ ಪ್ರವಾಸದ ಬಳಿಕ ಬ್ರೆಜಿಲ್ ಮತ್ತು ಗಯಾನಾಗೆ ಪ್ರಯಾಣ ಬೆಳೆಸಲಿದ್ದಾರೆ. ನ.18 ರಿಂದ 19 ರಂದು ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಾಲ್ಗೊಳ್ಳಲಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಡೊಮಿನಿಕಾ ಸರ್ಕಾರವು ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿರುವ `ಡಾಮಿನಿಕಾ ಅವಾರ್ಡ್ ಆಫ್ ಹಾನರ್’ ಅನ್ನು ಘೋಷಿಸಿದೆ.

PM Modi in nigeria 2

ಪ್ರಧಾನಿ ಮೋದಿ ಸ್ವೀಕರಿಸಿದ ಗೌರವಗಳ ಪಟ್ಟಿ
ರಷ್ಯಾ: 2024ರಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ‍್ಯೂ ಪ್ರಶಸ್ತಿ
ಭೂತಾನ್: 2024ರಲ್ಲಿ ಡ್ರುಕ್ ಗಯಾಲ್ಪೋ ಆದೇಶ
ಫ್ರಾನ್ಸ್: 2023ರಲ್ಲಿ ಲೀಜನ್ ಆಫ್ ಆನರ್ ಗ್ರ‍್ಯಾಂಡ್ ಕ್ರಾಸ್
ಈಜಿಪ್ಟ್: 2023ರಲ್ಲಿ ಆರ್ಡರ್ ಆಫ್ ನೈಲ್
ಪಪುವಾ ನ್ಯೂಗಿನಿಯಾ: 2023ರಲ್ಲಿ ಆರ್ಡರ್ ಆಫ್ ಲೋಗೊಹುವಿನ ಗ್ರ‍್ಯಾಂಡ್ ಕಂಪ್ಯಾನಿಯನ್
ಫಿಜಿ: 2023ರಲ್ಲಿ ಆರ್ಡರ್ ಆಫ್ ಫಿಜಿಯ ಒಡನಾಡಿ
ಪಲಾವ್: 2023ರಲ್ಲಿ ಎಬಾಕಲ್ ಪ್ರಶಸ್ತಿ
ಮಾಲ್ಡೀವ್ಸ್: 2019ರಲ್ಲಿ ನಿಶಾನ್ ಇಝುದ್ದೀನ್ ಆಳ್ವಿಕೆ
ಯುಎಇ: 2019ರಲ್ಲಿ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ
ಬಹ್ರೇನ್: 2019ರಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್
ಪ್ಯಾಲೆಸ್ಟೈನ್: 2018ರಲ್ಲಿ ಪ್ಯಾಲೆಸ್ಟೈನ್ ರಾಜ್ಯದ ಗ್ರ‍್ಯಾಂಡ್ ಕಾಲರ್ ಪ್ರಶಸ್ತಿ
ಅಫ್ಘಾನಿಸ್ತಾನ: 2016ರಲ್ಲಿ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ
ಸೌದಿ ಅರೇಬಿಯಾ: 2016ರಲ್ಲಿ ಕಿಂಗ್ ಅಬ್ದುಲ್ ಅಜೀಜ್ ಸಾಶ್ ಇದನ್ನೂ ಓದಿ:ರುಂಡವಿಲ್ಲದ ಮಹಿಳೆಯ ಮೃತದೇಹ ಅರೆಬೆತ್ತಲೆಯಾಗಿ ಪತ್ತೆ – ಮಣಿಪುರ ಮತ್ತೆ ಧಗ ಧಗ

Share This Article