ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಿಎಂಒ ಇಂಡಿಯಾ ಟ್ವೀಟ್ ಮಾಡಿದೆ.
PM @narendramodi will address the nation at 10 AM today.
— PMO India (@PMOIndia) October 22, 2021
Advertisement
ಗುರುವಾರ 100 ಕೋಟಿ ಲಸಿಕೆ ವಿತರಿಸಿ ಭಾರತ ಮೈಲಿಗಲ್ಲು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯೇ ಭಾಷಣ ಮಾಡಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿರಲಿಲ್ಲ. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?
Advertisement
I welcome the support and partnership from my friend @DrTedros in the global fight against COVID-19. This reaffirms the Indian philosophy of ‘Vasudhaiva Kutumbakam’, the need of the hour to ensure #VaccineEquity globally.
????????’s #VaccineCentury is a key milestone in that direction! https://t.co/2nPL3UcQkx
— Narendra Modi (@narendramodi) October 21, 2021
Advertisement
ಗುರುವಾರ ಬೆಳಗ್ಗೆ 9 ಗಂಟೆ 47 ನಿಮಿಷಕ್ಕೆ 100 ಕೋಟಿ ಹನಿ ಲಸಿಕೆ ವಿತರಿಸುವ ಮೂಲಕ ಇತಿಹಾಸ ನಿರ್ಮಾಣವಾಗಿತ್ತು. ಚೀನಾದ ಬಳಿಕ 100 ಕೋಟಿ ಡೋಸ್ ನೀಡಿರುವ ವಿಶ್ವದ 2ನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಶೇಕಡಾವಾರು ಪ್ರಮಾಣದಲ್ಲಿ ಶೇ. 23ರಷ್ಟು ಮಾತ್ರ ವ್ಯಾಕ್ಸಿನೇಷನ್ ಆಗಿದೆ.
Advertisement
ಆರಂಭದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ರಾಜಕೀಯ ಟೀಕೆ-ವದಂತಿ, ಜನರಲ್ಲಿ ಸೃಷ್ಟಿಯಾಗಿದ್ದ ಭೀತಿ ಎಲ್ಲದರ ಮಧ್ಯೆ ಈ ಸಾಧನೆ ಮಾಡಲಾಗಿದೆ. ಈ ಮೂಲಕ ಡಿಸೆಂಬರ್ ಅಂತ್ಯದೊಳಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಕೊಡುತ್ತೇವೆ ಎಂದು ಸುಪ್ರೀಂಕೋರ್ಟ್‍ಗೆ ಕೊಟ್ಟಿರುವ ವಾಗ್ದಾನವನ್ನು ಈಡೇರಿಸುವತ್ತ ಪ್ರಧಾನಿ ಮೋದಿ ಸರ್ಕಾರ ಪ್ರಯತ್ನ ಮಾಡುತ್ತಿದೆ.