– ಬಿಜೆಪಿ, ಆರ್ ಎಸ್‍ಎಸ್ ವಿಷವಿದ್ದಂತೆ
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಷ್ಣುವಿನ 11ನೇ ಅವತಾರವಾಗಿ ಬದಲಾಗಲು ಪ್ರಯತ್ನ ಮಾಡ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದಾರೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ ಬನ್ನು ಮೈದಾನದಲ್ಲಿ ನಡೆದ ಕಾಂಗ್ರೆಸ್ (Congress) ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಮತ್ತೆ ಮೋದಿ ಗೆದ್ರೆ ಮುಂದೆ ದೇಶದಲ್ಲಿ ಚುನಾವಣೆಗಳೇ ಇರಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಸರ್ವಾಧಿಕಾರ ಬರಲಿದೆ ಅಂತಾ ಭವಿಷ್ಯ ಹೇಳಿದ್ದಾರೆ.
Advertisement
Advertisement
ರಾಜಕೀಯವೇ ಬೇರೆ, ಧರ್ಮವೇ ಬೇರೆ. ಆದರೆ ಕೇಂದ್ರ ಸರ್ಕಾರ ಮತಕ್ಕಾಗಿ ಈ ಎರಡನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ವಿಷಕಾರಿ. ಇವೆರಡರಿಂದ ದೇಶದ ಜನ ದೂರವಿರಬೇಕು. ಯಾವಾಗ ಟಿವಿ ಆನ್ ಮಾಡಿದ್ರೂ ಪ್ರಧಾನಿ ಮೋದಿಯೇ ಕಾಣಿಸುತ್ತಾರೆ. ಪ್ರಧಾನಿ ಮೋದಿ ವಿಷ್ಣುವಿನ 11ನೇ ಅವತಾರವಾಗಿ ಬದಲಾಗಲು ಪ್ರಯತ್ನ ಮಾಡ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ದೂಷಿಸಿದ್ದಾರೆ.
Advertisement
Advertisement
ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ಇರೋದ್ರಿಂದ ನನ್ನ ಹೆಲಿಕಾಪ್ಟರ್ ಅನ್ನು ಇಳಿಯಲು ಅನುಮತಿಯನ್ನೂ ನೀಡಿಲ್ಲ. ಬಿಜೆಪಿ ಬರೀ ಸುಳ್ಳು ಹೇಳಿ ಸುಳ್ಳಿನ ಜಾಲ ಸೃಷ್ಟಿಸುತ್ತದೆ. ಬಿಜೆಪಿಯ ಸರ್ವಾಧಿಕಾರಕ್ಕೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ಆರ್‍ಎಸ್‍ಎಸ್-ಬಿಜೆಪಿ (RSS- BJP) ದೇಶದಲ್ಲಿ ಹಿಂಸೆ ಮತ್ತು ದ್ವೇಷವನ್ನು ಹಬ್ಬಿಸುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಆಪಾದನೆ ಮಾಡಿದ್ದಾರೆ. ಧರ್ಮ, ಜಾತಿ, ಭಾಷೆ ಹೆಸ್ರಲ್ಲಿ ದೇಶದ ಜನರನ್ನು ತಮ್ಮ ತಮ್ಮಲ್ಲೆ ಹೊಡೆದಾಡಿಕೊಳ್ಳಲು ಬಿಜೆಪಿ ಆರ್‍ಎಸ್‍ಎಸ್ ಪ್ರಚೋದನೆ ನೀಡ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.