ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಚಕ್ರವ್ಯೂಹ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಪ್ಲಾನ್ ಮಾಡಿದ್ದಾರೆ. ದೇವೇಗೌಡರು ಎಲ್ಲಿ ಸ್ಪರ್ಧೆ ಮಾಡ್ತಾರೆಯೋ ಅಲ್ಲಿಯೇ ಮೋದಿ ಇರುತ್ತಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭಿಸಿದೆ.
ಇಷ್ಟು ದಿನ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯ ಮೇಲಿದ್ದ ರಾಜ್ಯ ಬಿಜೆಪಿಯ ಕಣ್ಣು ಇದೀಗ ದೇವೇಗೌಡರತ್ತ ನೆಟ್ಟಿದೆ. ಕಲಬುರಗಿಯಲ್ಲಿ ಖರ್ಗೆಗೆ ಖೆಡ್ಡಾ ತೋಡಲು ಮೋದಿ ಸಮಾವೇಶ ಮಾಡಿದ್ದರು. ಈಗ ಮಾಜಿ ಪ್ರಧಾನಿ ದೇವೇಗೌಡರಿಗೆ ಖೆಡ್ಡಾ ತೋಡಲು ಮಹಾಪ್ಲಾನ್ ನಡೆಯುತ್ತಿದೆ ಎನ್ನಲಾಗಿದೆ.
Advertisement
Advertisement
ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ನಲ್ಲಿ ಗುರುತಿಸಿಕೊಂಡ ಗೌಡರ ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ದೇವೇಗೌಡರು ಎಲ್ಲಿ ನಿಲ್ತಾರೆಯೋ ಅಲ್ಲಿಯೇ ಮೋದಿ ರ‍್ಯಾಲಿ ನಡೆಸಲು ಸಿದ್ಧತೆ ಮಾಡಲಾಗಿದೆ. ಈ ಮೂಲಕ ದೇವೇಗೌಡರನ್ನ ಕಟ್ಟಿ ಹಾಕಲು ಮೋದಿ ಸಮಾವೇಶಕ್ಕೆ ಬಿಎಸ್‍ವೈ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಬೆಂಗಳೂರು ಉತ್ತರದಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದ್ರೆ ಅಲ್ಲಿ ಮೋದಿ ಜಾಥಾ ಅಥವಾ ತುಮಕೂರಿನಲ್ಲಿ ಸ್ಪರ್ಧೆ ಮಾಡಿದ್ರೆ ಅಲ್ಲಿಯೇ ಮೋದಿ ರ‍್ಯಾಲಿ ನಡೆಸಲು ಬಿಎಸ್‍ವೈ ಚಿಂತನೆ ನಡೆಸಿದ್ದಾರೆ. ಈ ಮೂಲಕ ಮೋದಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದೇವೇಗೌಡರನ್ನು ಮಣಿಸಲು ಬಿಜೆಪಿ ಮಹಾ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಬಿಜೆಪಿ ನಾಯಕರು ದೇವೇಗೌಡರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋದನ್ನ ಕಾಯುತ್ತಿದ್ದಾರೆ. ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಫಿಕ್ಸ್ ಮಾಡಲು ತಯಾರಿ ನಡೆಸಲಾಗುತ್ತದೆ ಎನ್ನಲಾಗಿದೆ.
Advertisement
ಒಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಇಬ್ಬರು ನಾಯಕರ ಟಾರ್ಗೆಟ್ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv