ನವದೆಹಲಿ: ದೇಶವೇ ಮೊದಲು ಎಂಬ ಗುರಿಯೊಂದಿಗೆ ಮುನ್ನುಗ್ಗಿ. ನಮ್ಮ ಅಭಿವೃದ್ಧಿಗೆ ನಾವೇ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ಇಂದು ನೂತನ ಸಂಸತ್ ಭವನದಲ್ಲಿ ಮಾತನಾಡಿದ ಅವರು, ಕಾರ್ಮಿಕರು (Labours) ಈ ಭವನವನ್ನು ಭವ್ಯಗೊಳಿಸಿದ್ದಾರೆ. ಇನ್ನು ಮುಂದೆ ಇಲ್ಲಿ ಕೂರುವ ಸಂಸದರು ಇದನ್ನು ದಿವ್ಯಗೊಳಿಸಬೇಕಿದೆ. ಈ ಭವನ ಮುಂದಿನ ಪೀಳಿಗೆಗೆ ಮಾರ್ಗಸೂಚಿಯಾಗಲಿದೆ. ಇಲ್ಲಿ ಕೈಗೊಳ್ಳುವ ನಿರ್ಣಯ ಭಾರತ (India) ದ ಭವಿಷ್ಯವನ್ನು ರೂಪಿಸಲಿದೆ ಎಂದು ಹೇಳಿದರು.
Advertisement
Advertisement
ಆಧುನಿಕ ಭಾರವನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ನಮ್ಮಲ್ಲಿ ಕಲೆ ಇದೆ, ಕೌಶಲ್ಯ ಇದೆ. ಈ ಭವನದ ಕಣಕಣದಲ್ಲಿಯೂ ಒಗ್ಗಟ್ಟಿದೆ. ಏಕ್ ಭಾರತ್.. ಶ್ರೇಷ್ಠ್ ಭಾರತ್ ಅನುರಣಿಸುತ್ತಿದೆ. ಲೋಕಸಭೆ ವಿನ್ಯಾಸಕ್ಕೆ ನವಿಲು ಪ್ರೇರಣೆಯಾಗಿದ್ದು, ಹಳೆಯ ಸಂಸತ್ತಿನಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದೇ ಕಾರಣಕ್ಕೆ ಹೊಸ ಸಂಸತ್ ತಲೆ ಎತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ
Advertisement
ಆಧುನಿಕ ತಂತ್ರಜ್ಞಾನದೊಂದಿಗೆ ಸಂಸತ್ ಭವನ (New Parliament) ನಿರ್ಮಾಣವಾಗಿದೆ. ಈ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. 60,000 ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಅವರ ಶ್ರಮವನ್ನು ಗೌರವಿಸಲು ನಾವು ಡಿಜಿಟಲ್ ಗ್ಯಾಲರಿಯನ್ನು ರಚಿಸಿದ್ದೇವೆ. ಈ ಭವನ ನೋಡಿದಾಗ ನನಗೆ ಹೆಮ್ಮೆ ಅನಿಸ್ತದೆ. ನಮ್ಮದು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹೊಸ ಸಂಸತ್ ಪ್ರೇರಣೆಯಾಗಿದೆ. ಕರ್ತವ್ಯವೇ ನಮಗೆ ಆದ್ಯತೆ ಆಗಬೇಕು. ಸುಧಾರಣೆಯ ದಿಕ್ಕಿನಲ್ಲೇ ನಾವು ಸದಾ ಸಾಗಬೇಕು. ಲೋಕ ಕಲ್ಯಾಣವೇ ಜೀವನ ಮಂತ್ರವಾಗಬೇಕು ಎಂದರು.
Advertisement
ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಮನೆ ಮನೆಗೆ ನೀರು ಕೊಂಡೊಯ್ದಿದ್ದೇವೆ. 30 ಸಾವಿರಕ್ಕೂ ಹೆಚ್ಚು ಪಂಚಾಯತ್ ಭವನ ನಿರ್ಮಿಸಿದ್ದೇವೆ. ಭಾರತದ ಮುಂದೆ ಅನೇಕ ಸವಾಲುಗಳಿವೆ. ಈ ಎಲ್ಲಾ ಸವಾಲುಗಳನ್ನು ವಿಶ್ವಾಸದಿಂದ ಮೆಟ್ಟಿ ನಿಂತಿದ್ದೇವೆ. ಮುಂದಿನ 25 ವರ್ಷಗಳಲ್ಲಿ ದೇಶದ ಭವಿಷ್ಯ ಬದಲಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.