ಬೆಂಗಳೂರು: ಬೋಯಿಂಗ್ ಸುಕನ್ಯಾ ಕಾರ್ಯಕ್ರಮ (Boeing Sukanya Programme) ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಇಂದು ನಗರದಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೊದಲು ಬೆಂಗಳೂರು ಬಗ್ಗೆ ಮೆಚ್ಚುಗೆ ಮಾತನ್ನಾಡಿದರು. ಜಾಗತಿಕ ಅಗತ್ಯಗಳನ್ನು ಪೂರೈಸುವ ನಗರ ಬೆಂಗಳೂರು ಆಗಿದೆ. ಈ ಬಿಐಇಟಿಸಿ ಕೇಂದ್ರ ವೈಮಾನಿಕ ಕ್ಷೇತ್ರಕ್ಕೆ ದೊಡ್ಡ ಬಲ ಕೊಡಲಿದೆ. ಈ ಕೇಂದ್ರ ಭಾರತದ ಮೇಲೆ ವಿಶ್ವದ ಭರವಸೆ ಇನ್ನಷ್ಟು ಗಟ್ಟಿ ಮಾಡಲಿದೆ ಎಂದರು.
Advertisement
Advertisement
ಒಂದು ದಿನ ಈ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶ್ವದ ಭವಿಷ್ಯ ರೂಪಿಸಲಿದೆ. ಕರ್ನಾಟಕದ ಜನತೆಗೂ ಇವತ್ತು ಮಹತ್ತರ ದಿನ. ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಲಾಯ್ತು. ಕರ್ನಾಟಕ ಜಾಗತಿಕ ರಂಗದಲ್ಲಿ ಹೆಚ್ಚು ಹೆಚ್ಚು ವಿಕಸಿತ ಆಗ್ತಿದೆ. ವೈಮಾನಿಕ ರಂಗದಲ್ಲಿ ಹೊಸ ಕೌಶಲ್ಯ ಕಲಿಯಲು ಹೆಚ್ಚು ಅವಕಾಶಗಳು ಸಿಕ್ತಿವೆ. ವೈಮಾನಿಕ ರಂಗದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗತೊಡಗಿವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಡಿಕೆಶಿ ಆತ್ಮೀಯ ಸ್ವಾಗತ
Advertisement
ಭಾರತ ಮಹಿಳಾ ಪೈಲಟ್ ಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. 15% ಮಹಿಳಾ ಪೈಲಟ್ ಗಳು ದೇಶದಲ್ಲಿದ್ದಾರೆ. ಜಾಗತಿಕ ಪ್ರಮಾಣಕ್ಕಿಂತ ಇದು ಮೂರು ಪಟ್ಟು ಹೆಚ್ಚು ಆಗಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ. ಚಂದ್ರಯಾನ ಮೂಲಕ ಯಾವ ದೇಶವೂ ಮಾಡದ ಸಾಧನೆ ಮಾಡಿದ್ದೇವೆ. ನಮ್ಮ ಸ್ಥಾನ ವಿಶ್ವದಲ್ಲಿ ಇನ್ನೂ ಮೇಲಿನ ಸ್ತರಕ್ಕೆ ಈ ಮೂಲಕ ಹೋಗಿದೆ ಎಂದು ಮೋದಿ ತಿಳಿಸಿದರು.
Advertisement
ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ನಮ್ಮ ಹೆಣ್ಣುಮಕ್ಕಳ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಲಿದೆ. ಭಾರತದಲ್ಲಿ ಉದ್ಯಮಿಗಳು ಇನ್ನೂ ಹೆಚ್ಚು ಹೆಚ್ಚು ಅವಕಾಶ ಬಯಸ್ತಿದ್ದಾರೆ. ವಿಮಾನದಲ್ಲಿ ಸಂಚರಿಸುವ ಡೊಮೆಸ್ಟಿಕ್ ಪ್ಯಾಸೆಂಜರ್ ಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗ್ತಿದೆ. ಭಾರತ ವೈಮಾನಿಕ ರಂಗದಲ್ಲಿ ಹತ್ತು ವರ್ಷದ ಹಿಂದೆ ಹೇಗಿತ್ತು?. ಕೇವಲ ಹತ್ತೇ ವರ್ಷಗಳಲ್ಲಿ ವೈಮಾನಿಕ ರಂಗದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ವೈಮಾನಿಕ ಸೇವೆಗಳು ಜನರಿಗೆ ಸುಲಭವಾಗಿ ಈಗ ಕೈಗೆಟುಕುತ್ತಿವೆ. 70 ವಿಮಾನ ನಿಲ್ದಾಣಗಳು ಈ ಹಿಂದೆ ಇದ್ವು, ಈಗ 150 ಇವೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅಷ್ಟೇ ಅಲ್ಲ ಅವುಗಳ ಕಾರ್ಯಕ್ಷಮತೆ, ಗುಣಮಟ್ಟವೂ ಹೆಚ್ಚಿದೆ ಎಂದು ಹೇಳಿದರು.
ವೈಮಾನಿಕ ರಂಗ ವೇಗವಾಗಿ ಬೆಳೆಯುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿದೆ. ಉದ್ಯೋಗವಕಾಶಗಳೂ ಹೆಚ್ಚಾಗಿವೆ. ಬೋಯಿಂಗ್ ಹಾಗೂ ಬೇರೆ ಅಂತರಾಷ್ಟ್ರೀಯ ವೈಮಾನಿಕ ಕಂಪನಿಗಳಿಗೂ ಭಾರತಕ್ಕೆ ಬರಲು ಇದೇ ಸರಿಯಾದ ಸಮಯ. ಕೇಂದ್ರದಲ್ಲಿ ಈಗ ಸ್ಥಿರ ಸರ್ಕಾರ ಇದೆ ಅಂತಾ ಮೋದಿ ಹೇಳಿದರು. ಈ ವೇಳೆ ಸಭಿಕರು ಚಪ್ಪಾಳೆ ತಟ್ಟಿದರು.