ರಾಮನಗರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮನಗರ ಜಿಲ್ಲೆಯ ಆಯ್ದ ಫಲಾನುಭವಿ ರೈತರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ರು.
ಮಾಗಡಿ ತಾಲೂಕಿನ ಚಂದುರಾಯನಪಾಳ್ಯದಲ್ಲಿರುವ ಕೃಷಿ ಕ್ಷೇತ್ರದಲ್ಲಿ ವೀಡಿಯೋ ಕಾನ್ಪರೆನ್ಸ್ ನಡೆಸಲಾಯಿತು. ರೈತರ ಜೊತೆ ಕನ್ನಡದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಸ್ಕಾರ, ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? ಕೃಷಿ ಹೇಗೆ ಮಾಡ್ತಿದ್ದೀರಿ? ಎಂದು ರೈತರನ್ನು ಉದ್ದೇಶಿಸಿ ಕನ್ನಡದಲ್ಲಿಯೇ ಪ್ರಶ್ನಿಸಿದ್ದಾರೆ. ಇದು ನೆರೆದಿದ್ದ ರೈತರ ಅಚ್ಚರಿಗೂ ಕಾರಣವಾಯಿತು.
Advertisement
ಮಣ್ಣಿನ ಫಲವತ್ತತೆ, ಮಣ್ಣು ಪರೀಕ್ಷೆ ಹಾಗೂ ಕೃಷಿ ನಡೆಸುವ ರೀತಿ, ಯಾವ ಯಾವ ಬಗೆಯ ಕೃಷಿ ಮಾಡುತ್ತೇವೆ ಅಂತಾ ರೈತರು ಪ್ರಧಾನಿ ಮೋದಿಯವರಿಗೆ ರೈತರು ವಿವರಣೆ ನೀಡಿದರು. 100 ಕ್ಕೂ ಹೆಚ್ಚು ರೈತರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು. ಆದರೆ 5 ಜನ ರೈತರ ಜೊತೆ ಮಾತ್ರ ಸಂವಾದ ನಡೆಸಲು ಸಾಧ್ಯವಾಯಿತು.