ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ಸೋಮವಾರ (ಮೇ 20) ರಾಯ್ ಬರೇಲಿ, ಅಮೇಥಿ ಹೈವೋಲ್ಟೇಜ್ ಕ್ಷೇತ್ರಗಳು ಸೇರಿ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ನಡುವೆ ಬಿಜೆಪಿ 370, ಎನ್‌ಡಿಎ ಒಕ್ಕೂಟ 400 ಸ್ಥಾನಗಳನ್ನು ಗೆಲ್ಲುವುದರೊಂದಿಗೆ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸವನ್ನು ಪ್ರಧಾನಿ ಮೋದಿ (PM Modi) ವ್ಯಕ್ತಪಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಮತ್ತು ಇಂಡಿಯಾ ಮೈತ್ರಿ ಕೂಟವು (INIDA Block) ಈವರೆಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದರಿಂದ ಮತದಾರರು ಅವರಿಂದ ಆಯ್ಕೆಯಾಗುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ. ಆದ್ರೆ ನಮ್ಮ ಗುರಿ ತುಂಬ ದೊಡ್ಡದಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನನಗಿದೆ. ಅತಿಯಾದ ಆತ್ಮವಿಶ್ವಾಸ ಇಲ್ಲ. ಈ ಹಿಂದೆಯೂ ಅತಿಯಾದ ಆತ್ಮವಿಶ್ವಾಸದಿಂದ ಗೆದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!
ಈಗ ದೇಶದಲ್ಲಿ ಜನರಿಗೆ ಅನುಭವ ಇದೆ. ಮತ (Vote) ಯಾರಿಗೆ ಹಾಕಬೇಕು ಅಂತ ಸುಲಭವಾಗಿ ತೀರ್ಮಾನಿಸುತ್ತಾರೆ. ಏಕೆಂದರೆ ಜನರಿಗೆ ಎಲ್ಲವೂ ಗೊತ್ತಿದೆ. ಯಾವುದೇ ವ್ಯಕ್ತಿಯಿರಲಿ, ಪಕ್ಷವಿರಲಿ, ಯಾರನ್ನ ಗೆಲ್ಲಿಸಬೇಕು? ಯಾರು ಗೆದ್ದರೆ ದೇಶ ಅಭಿವೃದ್ಧಿಯಾಗುತ್ತದೆ ಎಲ್ಲವೂ ತಿಳಿದಿದೆ. ನಾವು ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ದೊಡ್ಡ ಗುರಿಯಿಟ್ಟುಕೊಂಟಿದ್ದೇವೆ. ದೇಶದ ಅಭಿವೃದ್ಧಿಯ ನೀಲ ನಕ್ಷೆ ನಮ್ಮಬಳಿಯಿದೆ. ಅಭಿವೃದ್ಧಿಯ ಬಯಸುವ ಪ್ರತಿಯೊಬ್ಬರು ನಮಗೆ ಮತ ಹಾಕುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್’ ಜಾಡು ಅಡಿಯಲ್ಲಿ AAP ಮುಗಿಸಲು ಬಿಜೆಪಿ ಯತ್ನ: ಕೇಜ್ರಿವಾಲ್
ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಕೈ ಖಂಡಿತವಾಗಿಯೂ ಮೇಲಾಗಲಿದೆ. ನಾವು 3ನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಂಡು ಬನ್ನಿ ಅಂತ ಈಗಾಗಲೇ ನಮ್ಮ ಸಚಿವರಿಗೆ ತಿಳಿಸಿದ್ದೇನೆ. ಏಕೆಂದರೆ ನಮ್ಮ ಮುಂದಿನ ಆಡಳಿತ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ದೊಡ್ಡ ಗುರಿಯನ್ನು ಕ್ಷಿಪ್ರವಾಗಿ ಸಾಧಿಸುವ ಛಲ ಹೊಂದಿದ್ದೇವೆ. ಗುರಿ ದೊಡ್ಡದಾಗಿ ಇಟ್ಟುಕೊಂಡು, ಅದರ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಮಾಜಿ ಸರ್ಪಂಚ್ ಬಲಿ, ದಂಪತಿಗೆ ಗಾಯ!