ಸೀಕ್ರೆಟ್ ರಿವೀಲ್ – ಸೋಶಿಯಲ್ ಮೀಡಿಯಾ ತೊರೆಯುತ್ತಿರುವ ಬಗ್ಗೆ ಪ್ರಧಾನಿ ಸ್ಪಷ್ಟನೆ

Public TV
3 Min Read
pm modi

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಬಿಡಲು ಯೋಚಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದರು. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಯಾಕೆ ಹೀಗೆ ಟ್ವೀಟ್ ಮಾಡಿದ್ದು ಎಂದು ಸ್ವತಃ ಮೋದಿ ಅವರೇ ರಿವೀಲ್ ಮಾಡಿದ್ದಾರೆ.

modi

ಹೌದು. ಮೋದಿ ಟ್ವೀಟ್ ಎಲ್ಲೆಡೆ ಭಾರೀ ಸದ್ದು ಮಾಡಿತ್ತು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಮೋದಿ ಅವರು ಹೀಗೆ ಟ್ವೀಟ್ ಮಾಡಿದ ಕೂಡಲೇ ನೆಟ್ಟಿಗರು ಶಾಕ್ ಆಗಿದ್ದರು. ಮೋದಿ ಅವರು ಹೀಗೆ ಹೇಳಲು ಕಾರಣವೇನು ಎಂಬ ಪ್ರಶ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇಂದು ಈ ಬಗ್ಗೆ ಮೋದಿ ಅವರೇ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಮಹಿಳೆಯರ ದಿನ ಅಂತ ತಿಳಿಸಿದ್ದಾರೆ.

ಮಾರ್ಚ್ 8 ಭಾನುವಾರ ಮಹಿಳೆಯರ ದಿನಾಚರಣೆ ಹಿನ್ನೆಲೆ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಮಹಿಳೆಯರಿಗೆ ಬಳಸಲು ಅವಕಾಶ ನೀಡುತ್ತಿದ್ದಾರೆ. ಸೋಮವಾರ ರಾತ್ರಿ ಬ್ರೇಕಿಂಗ್ ನ್ಯೂಸ್ ಕೊಟ್ಟ ಮೋದಿ ಅವರು ಇಂದು ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ಬಾರಿಯ ಮಹಿಳೆಯರ ದಿನದಂದು ನಾನು ನನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತಮ್ಮ ಜೀವನ ಮತ್ತು ಕೆಲಸದ ಮೂಲಕ ನಮಗೆ ಸ್ಫೂರ್ತಿಯಾದ ಮಹಿಳೆಯರಿಗೆ ಬಳಸಲು ನೀಡುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಒಂದು ಹೊಸ ಅಭಿಯಾನವನ್ನೇ ಆರಂಭಿಸಿದ್ದಾರೆ. ಸ್ಪೂರ್ತಿದಾಯಕ ಜೀವನ ನಡೆಸಿ ಇತರರಿಗೆ ಮಾದರಿಯಾದ ಮಹಿಳೆಯರಿಗೆ ಗೌರವ ಸಲ್ಲಿಸಲು ಮೋದಿ ಈ ಪ್ಲಾನ್ ಮಾಡಿದ್ದಾರೆ. #SheInspiresUs ಹ್ಯಾಷ್‍ಟ್ಯಾಗ್ ಬಳಸಿ, ನಿಮ್ಮ ಜೀವನದಲ್ಲಿ ನಿಮಗೆ ಸ್ಪೂರ್ತಿಯಾದ ಮಹಿಳೆಯರ ಬಗ್ಗೆ ಪೋಸ್ಟ್ ಹಾಕಿ ಎಂದು ಮೋದಿ ಅವರು ಕರೆ ಕೊಟ್ಟಿದ್ದಾರೆ.

modi social media 1

ಮೋದಿ ಈ ಹಿಂದೆ ಏನು ಟ್ವೀಟ್ ಮಾಡಿದ್ದರು?
ಈ ಭಾನುವಾರ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ದೂರ ಉಳಿಯಲು ಚಿಂತಿಸುತ್ತಿದ್ದೇನೆ. ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ ಹಾಗೂ ಯೂಟ್ಯೂಬ್‍ಗಳಿಂದ ದೂರ ಉಳಿಯಬೇಕೆಂದು ಚಿಂತಿಸಿದೆ. ಈ ಕುರಿತು ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಬರೆದು ಮೋದಿ ಅವರು ಟ್ವೀಟ್ ಮಾಡಿದ್ದರು.

modi social media

ದೇಶದಲ್ಲಿನ ಆಗುಹೋಗುಗಳು, ತಾವು ಭಾಗವಹಿಸಿದ ಕಾರ್ಯಕ್ರಮಗಳು, ತಮ್ಮ ಅನಿಸಿಕೆ, ದೇಶವಾಸಿಗಳ ಬಳಿ ಹಂಚಿಕೊಳ್ಳಬೇಕಾದ ವಿಚಾರಗಳನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ದೂರ ಉಳಿಯುವ ಮಾತುಗಳನ್ನಾದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

modi

ಇಷ್ಟು ಮಾತ್ರವಲ್ಲದೆ ಪ್ರಧಾನಿ ಮೋದಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಸುಮಾರು 53.4 ಮಿಲಿಯನ್(5.44 ಕೋಟಿ) ಹಿಂಬಾಲಕರನ್ನು ಹೊಂದಿದ್ದು, ಫೇಸ್‍ಬುಕ್‍ನಲ್ಲಿ 44 ಮಿಲಿಯನ್(4.40 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಸಹ ವಿಶ್ವದ ಪ್ರಭಾವಿ ನಾಯಕರಾಗಿದ್ದು, 30 ಮಿಲಿಯನ್(3 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್‍ಸ್ಟಾಗ್ರಾಮ್‍ನಲ್ಲಿ 14.9 ಮಿಲಿಯನ್(1.49 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಜನವರಿ 2009ರಂದು ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ ತೆರೆದಿದ್ದರು. ಆದರೆ ಇದೀಗ ದೇಶದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಗಳಿಸಿದ್ದಾರೆ.

Modi hh

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಕುರಿತ ಪ್ರಧಾನಿ ಮೋದಿ ನಿರ್ಧಾರದ ಟ್ವೀಟ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಪ್ರತಿಕ್ರಿಯಿಸಿದ್ದರು. ದ್ವೇಷವನ್ನು ಬಿಡಬೇಕೇ ಹೊರತು ಸಾಮಾಜಿಕ ಜಾಲತಾಣಗಳ ಖಾತೆಗಳನ್ನಲ್ಲ ಎಂದು ಟಾಂಗ್ ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿತ್ತು. ಹಲವರು ಸಾಮಾಜಿಕ ಜಾಲತಾಣಗಳಿಂದ ದೂರ ಹೋಗಬೇಡಿ ಸರ್ ಎಂದು ಕಮೆಂಟ್ ಮಾಡುತ್ತಾ, ಟ್ವಿಟ್ಟರ್ ನಲ್ಲಿ #NoSir ಬಳಸಿದ್ದರಿಂದ ವಿಶ್ವದಲ್ಲೇ ನಂಬರ್ 2 ಟ್ರೆಂಡಿಂಗ್ ಆಗುವಂತೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *