ನವದೆಹಲಿ: ಸಿಖ್ ಗುರು ತೇಗ್ ಬಹುದ್ದೂರ್ 400ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪುಕೋಟೆಯಲ್ಲಿ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದರು. ನಂತರ ಗುರುಗಳ ತ್ಯಾಗದಿಂದ ಭಾರತ ಸಂಪ್ರದಾಯಗಳ ಬೀಡಾಗಿದೆ ಎಂದು ಜನರಿಗೆ ಹೇಳುತ್ತಾ, ಭಾರತವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆಕೊಟ್ಟರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುಗಳ ಆರ್ಶೀವಾದದಿಂದ ಅವರ ಆದರ್ಶನವನ್ನು ದೇಶದ ಜನರು ಮುಂದುವರಿಸುತ್ತಿರುವುದು ತುಂಬಾ ಸಂತೋಷ ತರುತ್ತಿದೆ. ಈ ಶುಭ ಸಮಯದಲ್ಲಿ ನಾನು ಎಲ್ಲ 10 ಗುರುಗಳ ಪಾದಕ್ಕೆ ನಮನವನ್ನು ಸಲ್ಲಿಸುತ್ತಿದ್ದೇನೆ. ಈ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನು ಹೃದಯ ತುಂಬಿ ಅಭಿನಂದಿಸುತ್ತಿದ್ದೇನೆ ಎಂದರು. ಇದನ್ನೂ ಓದಿ: ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್
Advertisement
Advertisement
ಮೊಘಲ್ ದೊರೆ ಔರಂಗಜೇಬ್‍ನ ನಿರಂಕುಶ ಚಿಂತೆನೆಗಳಿಗೆ ಎದೆಯೊಡ್ಡಿದ ಗುರು ತೇಜ್ ಬಹಾದ್ದೂರ್, ಭಾರತದ ಆದರ್ಶಗಳ ರಕ್ಷಣೆಗೆ ಬಂಡೆಯಂತೆ ನಿಂತರು. ಔರಂಗಜೇಬ್ ನೂರಾರು ತಲೆಗಳನ್ನು ಕತ್ತರಿಸಿದರೂ, ಗುರು ತೇಜ್ ಬಹಾದ್ದೂರ್ ಅವರ ನಂಬಿಕೆಯನ್ನು ಆತನಿಂದ ಅಲುಗಾಡಿಲು ಸಾಧ್ಯವಾಗಲಿಲ್ಲ. ಆಧುನಿಕ ಭಾರತ ಕೂಡ ಗುರುಗಳ ಆಶೀರ್ವಾದದಿಂದ ಇಂತದ್ದೇ ಛಾತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Advertisement
We bow to Sri Guru Tegh Bahadur Ji on his Parkash Purab. https://t.co/c1uRCOSZta
— Narendra Modi (@narendramodi) April 21, 2022
Advertisement
ಅನೇಕ ಹೋರಾಟಗಾರರ ಬಲಿದಾನದಿಂದ ನಾವು ಇಲ್ಲಿದ್ದೇವೆ. ಈಗಿರುವ ನಮ್ಮ ಭಾರತ ಎಲ್ಲ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುತ್ತೆ. ರಾಜತಂತ್ರಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳ ಬಗ್ಗೆ ಭಾರತವೇ ನಿರ್ಧಾರ ಮಾಡುತ್ತೆ. ಪರೋಪಕಾರವನ್ನು ಹೇಳಿಕೊಟ್ಟಿರುವುದು ನಮ್ಮ ಹಿಂದೂಸ್ತಾನ್. ಭಾರತಕ್ಕೆ ಗೌರವ ತಂದುಕೊಂಡಲು ಎಷ್ಟೋ ಜನರು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ. ಈ ಭಾರತೀಯ ಭೂಮಿ ಕೇವಲ ದೇಶವಲ್ಲ. ಇದು ಶ್ರೇಷ್ಠವಾದ ಸಂಪ್ರದಾಯವನ್ನು ಹೊಂದಿದೆ. ಇದಕ್ಕಾಗಿ ನಮ್ಮ ಹಲವು ಖುಷಿಗಳು, ಸನ್ಯಾಸಿಗಳು ಹಲವು ವರ್ಷಗಳ ತಪಸ್ಸು ಮಾಡಿದ್ದಾರೆ. ಅವರ ವಿಚಾರವನ್ನು ಎಲ್ಲಕಡೆ ತಿಳಿಸಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಬಂದು ನನಗೆ ಯಾವ ರೀತಿಯ ಶಾಂತಿ ಸಿಕ್ಕಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ಚಿಂತನೆ, ನಿರಂತರ ಶ್ರಮ ನಮ್ಮ ಸಿಖ್ ಧರ್ಮದ ಗುರುತು. ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುಂದೆ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೆಂಪು ಕೋಟೆ ವಿಶೇಷ, ಶ್ರೇಷ್ಠ ದಿನಗಳ ಆಚರಣೆಗೆ ಸಾಕ್ಷಿಯಾಗಿದೆ. ಇಂದು ಗುರು ತೇಜ್ ಬಹುದ್ದೂರ್ ಅವರ ಹುತಾತ್ಮತೆಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದರು.
ಭಾರತ ಯಾವತ್ತೂ ಬೇರೆ ದೇಶಕ್ಕೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಬೇರೆ ದೇಶಗಳಿಗೆ ಸಹಾಯ ಮಾಡುತ್ತೇವೆ. ಭಾರತ ವಿಶ್ವದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ನಮ್ಮ ರಾಷ್ಟ್ರ ಶಾಂತಿಯಿಂದ ಎಲ್ಲವನ್ನು ಎದುರಿಸುತ್ತೆ. ನಾವು ತಮ್ಮ ಗುರುತಿನ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಭಾರತವನ್ನು ಮೇಲೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಎಲ್ಲರೂ ಕೆಲಸ ಮಾಡಬೇಕು. ಇದಕ್ಕೆ ಗುರುಗಳ ಆರ್ಶೀವಾದಿಂದ ನಮ್ಮ ದೇಶ ಮೇಲೆ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ
ನಮ್ಮ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮೀಸಲಿಡಬೇಕು. ನಮ್ಮ ಪ್ರತಿಯೊಂದು ಯೋಚನೆಯನ್ನು ದೇಶಕ್ಕಾಗಿ ಮೀಸಲಿಡಬೇಕು. ಈ ಶುಭದಿನದಂದು ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುವುದು ಒಂದೇ ನಾವು ದೇಶಕ್ಕಾಗಿ ಹೋರಾಟ ಮಾಡೋಣ. ದೇಶಕ್ಕಾಗಿ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಎಲ್ಲರೂ ಸರಿಸಮಾನರು ಎಂದು ಕರೆ ಕೊಟ್ಟರು. ಇದೇ ವೇಳೆ ಭಾರತ ನಮ್ಮ ಗುರುಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಲಿದೆ. ನಾವು ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವನ್ನಾಗಿ ಮಾಡುತ್ತೇವೆ. ಆಧುನಿಕ ಭಾರತದ ನಾಗಾಲೋಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.