ಶಿಮ್ಲಾ: ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಮಂಗಳವಾರ ಹಿಮಾಚಲ ಪ್ರದೇಶಕ್ಕೆ ಬಂದಿಳಿದಿದ್ದು, ಅವರನ್ನು ಸ್ವಾಗತಿಸಲು ನಗರದ ಮಾಲ್ ರಸ್ತೆಯ ಬೀದಿಗಳಲ್ಲಿ ಅಪಾರ ಬೆಂಬಲಿಗರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಜನಸಮೂಹದ ನಡುವೆ ಒಬ್ಬ ಮಹಿಳೆ ಹೀರಾಬೆನ್ ಮೋದಿಯವರ ಪೆನ್ಸಿಲ್ ಸ್ಕೆಚ್ ಅನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.
Advertisement
ನಂತರದಲ್ಲಿ ಮಹಿಳೆಯು ಪ್ರಧಾನಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಅವರು ತಮ್ಮ ಬೆಂಬಲಿಗರಿಂದ ಈ ಅದ್ಭುತ ಉಡುಗೊರೆಯನ್ನು ಸ್ವೀಕರಿಸಲು ಸಂಪೂರ್ಣವಾಗಿ ಉತ್ಸುಕರಾಗಿದ್ದರು. ಅಷ್ಟೇ ಅಲ್ಲದೇ ಮಹಿಳೆಯು ಪ್ರಧಾನಿಯವರ ಚಿತ್ರವನ್ನು ಸಹ ಚಿತ್ರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅವರು ಮಹಿಳೆಯೊಂದಿಗೆ ಸಂಭಾಷಣೆ ನಡೆಸುತ್ತಿರುವ ಸಂದರ್ಭವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್
Advertisement
बीते 8 वर्षों के प्रयासों के जो नतीजे मिले हैं, उनसे मैं बहुत विश्वास से भरा हुआ हूं। भारतवासियों के सामर्थ्य के आगे कोई भी लक्ष्य असंभव नहीं। pic.twitter.com/orzfIEx58l
— Narendra Modi (@narendramodi) May 31, 2022
Advertisement
ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಧಾನಿ ಅವರು ತಮ್ಮ ಬೆಂಬಲಿಗರಿಂದ ತಮ್ಮ ತಾಯಿಯ ಸ್ಕೆಚ್‍ನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದಾರೆ. ಈ ಅಮೂಲ್ಯವಾದ ಪೋಟೋವನ್ನು ಉಡುಗೊರೆಯಾಗಿ ನೀಡಿದ ಮಹಿಳೆಯೊಂದಿಗೆ ಸಂಭಾಷಣೆಯನ್ನು ನಡೆಸಿದ ಅವರು, ಇದನ್ನು ನೀವೇ ತಯಾರಿಸಿದ್ದೀರಾ? ಇದನ್ನು ಮಾಡಲು ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್
Advertisement
हम वोट बैंक बनाने के लिए नहीं, नए भारत को बनाने के लिए काम कर रहे हैं। हमने शत-प्रतिशत लाभ, शत-प्रतिशत लाभार्थी तक पहुंचाने का बीड़ा उठाया है, लाभार्थियों के सैचुरेशन का प्रण लिया है। pic.twitter.com/iXmfgJ5xUK
— Narendra Modi (@narendramodi) May 31, 2022
ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಶಿಮ್ಲಾ ತಲುಪಿದ್ದಾರೆ. ಅವರು 16 ಕೇಂದ್ರ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಸರ್ಕಾರದ ಎಂಟು ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.