ಮುಂಬೈ: ದೇಶ ಹಾಗೂ ಸಮಾಜಕ್ಕಾಗಿ ದುಡಿದ ಸೇವೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಮುಂಬೈನಲ್ಲಿ 80ನೇ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದ ಮೋದಿ ಈ ಪ್ರಶಸ್ತಿಯನ್ನು ನನ್ನ ದೇಶದ ಪ್ರಜೆಗಳಿಗೆ ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ವಿಶೇಷ ಸ್ಥಾನಮಾನ ರದ್ದತಿ ನಂತರ ಜಮ್ಮು-ಕಾಶ್ಮೀರಕ್ಕೆ ಮೋದಿ ಮೊದಲ ಭೇಟಿ
Advertisement
Advertisement
ಬಳಿಕ ಮಾತನಾಡಿದ ಅವರು, ಈ ಸಂಗೀತದ ಶಕ್ತಿಯನ್ನು ಲತಾ ದೀದಿಯ ರೂಪದಲ್ಲಿ ಕಂಡ ನಾವೆಲ್ಲರೂ ಅದೃಷ್ಟವಂತರು. ಸಂಗೀತಕ್ಕೆ ವಿಶೇಷವಾದ ಶಕ್ತಿ ಇದೆ. ಸಂಗೀತವು ಮಾತೃತ್ವ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ. ಸಂಗೀತವು ನಿಮ್ಮನ್ನು ದೇಶಭಕ್ತಿಯೆಡೆಗೆ ಕೊಂಡೊಯ್ಯವ ಮಹಾಶಕ್ತಿ ಹೊಂದಿದೆ. ಲತಾ ದೀದಿಯನ್ನು ಜನ ತಾಯಿ ಸರಸ್ವತಿಯ ಪ್ರತಿರೂಪವೆಂದು ಕಂಡಿದ್ದರು. ಲತಾ ದೀದಿ ಜನರಿಗೆ ಸೇರಿದ ಹಾಗೆ ಅವರ ಹೆಸರಿನಲ್ಲಿ ನನಗೆ ನೀಡಿರುವ ಈ ಪ್ರಶಸ್ತಿ ಜನತೆಗೆ ಅರ್ಪಿಸುತ್ತೇನೆ ಎಂದು ನುಡಿದರು.
Advertisement
ಲತಾ ದೀದಿ ನನ್ನ ದೊಡ್ಡ ಅಕ್ಕ. ಲತಾ ದೀದಿ ಹಲವು ವರ್ಷಗಳಿಂದ ಪ್ರೀತಿ ಮತ್ತು ಭಾವನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನನಗೆ ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ?ಲತಾ ದೀದಿ ಅವರು ಸಂಗೀತದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದರು. ಸುಮಾರು 80 ವರ್ಷಗಳ ಕಾಲ ಅವರ ಧ್ವನಿ ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. 75 ವರ್ಷಗಳ ದೇಶದ ಪಯಣ ಅವರ ಸ್ವರಗಳೊಂದಿಗೆ ನಂಟು ಹೊಂದಿದೆ. ಲತಾ ದೀದಿ ಯಾವತ್ತು ಸಂಗೀತ ಲೋಕದ ದೃವತಾರೆ. ಲತಾ ದೀದಿ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ನಾವೆಲ್ಲರೂ ಮಂಗೇಶ್ಕರ್ ಕುಟುಂಬಕ್ಕೆ ಋಣಿಯಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್
ಲತಾ ದೀದಿ ದೇಶದ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದ್ದರು. ಹಿಂದಿ, ಮರಾಠಿ, ಸಂಸ್ಕøತ ಯಾವುದೇ ಭಾಷೆ ಇರಲಿ ಲತಾಜಿ ಅವರ ಧ್ವನಿ ಎಲ್ಲಾ ಭಾಷೆಯಲ್ಲೂ ಒಂದೇ ರೀತಿಯಲ್ಲಿ ಇರುತ್ತಿತ್ತು. ದೀನಾನಾಥ್ ಮಂಗೇಶ್ಕರ್ ಅವರ ಪುಣ್ಯತಿಥಿಯಂದು ಪ್ರತಿ ವರ್ಷ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಆಯೋಜಿಸಲಾಗುವುದು. ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲು ಉದ್ದೇಶಿಸಲಾಗಿದೆ. ಪ್ರಶಸ್ತಿಯನ್ನು ಪ್ರಕಟಿಸಿದ ಮಂಗೇಶ್ಕರ್ ಕುಟುಂಬ ಮತ್ತು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್, ಲತಾ ಮಂಗೇಶ್ಕರ್ ಅವರ ಗೌರವ ಮತ್ತು ಸ್ಮರಣಾರ್ಥ ಈ ವರ್ಷದಿಂದ ಪ್ರಶಸ್ತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಬಿಹು ಕಾರ್ಯಕ್ರಮದಲ್ಲಿ ವಾದ್ಯ ನುಡಿಸಿದ ಮೋದಿ
ಲತಾ ದೀದಿ ಕೊಡುಗೆಯನ್ನು ದೇಶದ ಜನ ಮರೆಯುವುದಿಲ್ಲ. ಅವರ ಸಂಗೀತ ಎಲ್ಲಡೆ ಮೊಳಗಲಿ. ದೇಶದ ಬೆಳವಣಿಗೆಗೆ ಅವರು ಸಂಗೀತದ ಮೂಲಕ ಸಹಕರಿಸಿದ್ದಾರೆ. ದೇಶ ಮತ್ತಷ್ಟು ಬಲಿಷ್ಠವಾಗಿ ಮುನ್ನುಗ್ಗಬೇಕೆಂಬುದು ಅವರ ಕನಸಾಗಿತ್ತು ಎಂದು ನುಡಿದರು.