‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಸೆ.28ಕ್ಕೆ ರಿಲೀಸ್ ಆಗಿದೆ. ಕೆಲದಿನಗಳ ಹಿಂದೆ ಸಿನಿಮಾ ನೋಡಿ ಸುಧಾಮೂರ್ತಿ ಅವರು ಮೆಚ್ಚುಗೆ ಸೂಚಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನ ಹಾಡಿ ಹೊಗಳಿದ್ದಾರೆ.
ಜೋಧ್‌ಪುರ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಭಾಷಣದ ಮಧ್ಯೆಯೇ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪ್ರಶಂಸಿದರು. ಈ ಸಿನಿಮಾ ಒಂದು ಇತ್ತೀಚೆಗೆ ಬಂದಿದೆ ಎಂದು ನಾನು ಕೇಳ್ಪಟ್ಟೆ. ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟಕ್ಕೆ ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಪಟ್ಟ ಶ್ರಮ. ಅದರಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ‘ದಿ ವ್ಯಾಕ್ಸಿನ ವಾರ್’ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದು ಪ್ರಧಾನಿ ಮೋದಿ (Narendra Modi) ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ಅನುಪಮಾ ಪರಮೇಶ್ವರನ್ ಮದುವೆ
ನಮ್ಮ ವಿಜ್ಞಾನಿಗಳು ಇಷ್ಟು ಅದ್ಭುತವಾದ ಕಾರ್ಯ ಮಾಡಿದ್ದಾರೆ ಎಂದು ಆ ಸಿನಿಮಾ ನೋಡಿದ ಬಳಿಕ ಪ್ರತಿ ಭಾರತೀಯನಿಗೂ ಹೆಮ್ಮೆ ಎನಿಸುತ್ತಿದೆ. ಚಂದ್ರಯಾನ ನಡೆಯುತ್ತದೆ, ನಮ್ಮ ವಿಜ್ಞಾನಿಗಳ ಬಗ್ಗೆ ಗೌರವ ಹೆಚ್ಚುತ್ತದೆ. ವ್ಯಾಕ್ಸಿನ್ ನಿರ್ಮಾಣ ಆಗುತ್ತದೆ ನಮ್ಮ ವಿಜ್ಞಾನಿಗಳಿಗೆ ಗೌರವ ಸಂದಾಯವಾಗುತ್ತದೆ. ದೇಶದ ಯುವಕರು ವಿಜ್ಞಾನಿಗಳ ಬಗ್ಗೆ ವಿಜ್ಞಾನದ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದಿದ್ದಾರೆ.
ಸಿನಿಮಾ ನಿರ್ಮಿಸಿದ ಇಡೀ ತಂಡಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಿನಿಮಾ ಮೂಲಕ ನೀವು ದೇಶದ ವಿಜ್ಞಾನಿಗಳು- ವಿಜ್ಞಾನಕ್ಕೆ ಮಹತ್ವ ನೀಡಿದ್ದೀರಿ. ಈ ನಿಮ್ಮ ಕಾರ್ಯವು ಮುಂಬರುವ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದಿದ್ದಾರೆ. ಈ ಹಿಂದೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು.
‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಪಲ್ಲವಿ ಜೋಶಿ, ‘ಕಾಂತಾರ’ (Kantara) ನಟಿ ಸಪ್ತಮಿ ಗೌಡ(Saptami Gowda), ಅನುಪಮ್ ಖೇರ್ ಸೇರಿದಂತೆ ಹಲವರು ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]