ಇತ್ತೀಚಿಗೆ ಬಹುಭಾಷಾ ನಟ ಮಾಧವನ್ (R Madhavan) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (Bengaluru Kempegowda International Airport) ನೂತನ ಟರ್ಮಿನಲ್ 2ಗೆ (Terminal 2) ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮೂಲಸೌಕರ್ಯವನ್ನ ನೋಡಿ ಹಾಡಿ ಹೊಗಳಿದ್ದರು. ವಿಮಾನ ನಿಲ್ದಾಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಟ ಶ್ಲಾಘಿಸಿದ್ದರು. ಮಾಧವನ್ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಇದ್ದೇನೆ, ಇದು ಅತ್ಯುನ್ನತವಾಗಿದೆ. ಇಲ್ಲಿನ ಮೂಲಸೌಕರ್ಯಗಳು ವಿಶ್ವದ ಅತ್ಯುತ್ತಮಗಳಲ್ಲಿ ಒಂದಾಗಿದೆ. ನನಗೆ ತುಂಬಾ ಹೆಮ್ಮೆ ಆಗಿದೆ. ಈ ವಿಮಾನ ನಿಲ್ದಾಣದ ಒಳಂಗಾಣ ವಿನ್ಯಾಸ ಅದ್ಭುತವಾಗಿದೆ. ಇದನ್ನು ವಿಮಾನ ನಿಲ್ದಾಣ ಎಂದರೆ ಯಾರೂ ನಂಬುವುದಿಲ್ಲ. ಇಲ್ಲಿನ ಸೀಲಿಂಗ್‌ನಲ್ಲಿ ಗಿಡಗಳನ್ನು ತೂಗುಹಾಕಲಾಗಿದೆ. ಇದನ್ನೂ ಓದಿ:ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ
Advertisement
View this post on Instagram
Advertisement
ಅವೆಲ್ಲ ನಿಜವಾದ ಗಿಡಗಳು, ಅವುಗಳಿಗೆ ಪ್ರತಿದಿನ ಸೀಲಿಂಗ್‌ನಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧವನ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
Advertisement
ಆರ್.ಮಾಧವನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ‘ಭಾರತದ ಅಭಿವೃದ್ಧಿಗಾಗಿ ಮುಂದಿನ ಜನರೇಷನ್‌ಗೆ ಮೂಲಭೂತ ಸೌಕರ್ಯಗಳು’ ಎಂದು ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಬೆಂಗಳೂರು ಎಂದು ಕಾಮೆಂಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.