ಸೂರಜ್‌ಕುಂಡ್: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಪೊಲೀಸರಿಗೆ ಒಂದು ದೇಶ ಒಂದು ಸಮವಸ್ತ್ರ(One Nation One Uniform) ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ.
ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವರ ಜೊತೆ ಎರಡು ದಿನ ಚಿಂತನ ಶಿಬಿರವನ್ನು(Chintan Shivir) ಆಯೋಜಿಸಿದೆ. ಈ ಶಿಬಿರ ಗುರುವಾರ ಆರಂಭಗೊಂಡಿದ್ದು ಇಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದನ್ನೂ ಓದಿ: IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ
Advertisement
Advertisement
ಈ ವೇಳೆ ಒಂದು ದೇಶ ಒಂದು ಸಮವಸ್ತ್ರ ಕಲ್ಪನೆಯನ್ನು ಪ್ರಸ್ತಾಪಿಸಿದ ಮೋದಿ ಇದು ಕೇವಲ ಸಲಹೆಯಾಗಿದೆ. ಇದನ್ನು ನಾನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಒಂದು ವೇಳೆ ಇದು ಜಾರಿಯಾದರೆ ಪೊಲೀಸರ ಗುರುತು ಒಂದೇ ಆಗಿರುತ್ತದೆ. ದೇಶಾದ್ಯಂತ ಪೊಲೀಸರು ಒಂದೇ ರೀತಿ ಕಾಣುತ್ತಾರೆ ಎಂದರು. ಇದನ್ನೂ ಓದಿ: 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್
Advertisement
5, 50, 100 ವರ್ಷಗಳಲ್ಲಿ ಇದು ಆಗಬಹುದು. ಈ ನಿಟ್ಟಿನಲ್ಲಿ ಸ್ವಲ್ಪ ಯೋಚಿಸಿ ಎಂದು ರಾಜ್ಯಗಳಿಗೆ ಸಲಹೆ ನೀಡಿದರು. ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲು ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕು ಎಂದು ಮೋದಿ ಹೇಳಿದರು.
ಈ ಶಿಬಿರದಲ್ಲಿ ರಾಜ್ಯಗಳ ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾ ನಿರ್ದೇಶಕರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಕೇಂದ್ರ ಪೊಲೀಸ್ ಸಂಸ್ಥೆಗಳ ನಿರ್ದೇಶಕರು ಭಾಗವಹಿಸಿದ್ದರು.
Addressing Chintan Shivir of Home Ministers of states being held in Haryana. https://t.co/LIMv4dfhWv
— Narendra Modi (@narendramodi) October 28, 2022
ಪೊಲೀಸ್ ಪಡೆಗಳ ಆಧುನೀಕರಣ, ಸೈಬರ್ ಅಪರಾಧ ನಿರ್ವಹಣೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ, ಕರಾವಳಿ ಭದ್ರತೆ, ಮಹಿಳಾ ಸುರಕ್ಷತೆ, ಮಾದಕ ವಸ್ತು ಕಳ್ಳ ಸಾಗಣೆ ಮುಂತಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.