ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram mandir) ಇಂದು ಮಧ್ಯಾಹ್ನ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಆಗಿದೆ. ಈ ಮೂಲಕ 500 ವರ್ಷಗಳ ಹಿಂದೂಗಳ ಕನಸು ನನಸಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿಯವರು(Narendra Modi ಪ್ರಾಣಪ್ರತಿಷ್ಠೆ ಬಳಿಕ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.
Advertisement
ಹೌದು. ಇಂದು 12 ಗಂಟೆಯ ಬಳಿಕ ಪೂಜಾ-ವಿಧಿ ವಿಧಾನಗಳನ್ನು ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ನೆರವೇರಿಸಲಾಯಿತು. ಬಳಿಕ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಅಲ್ಲಿನ ಪ್ರಧಾನ ಅರ್ಚಕರು ಭಾಗಿಯಾಗಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ
Advertisement
Advertisement
ಪ್ರಾಣಪ್ರತಿಷ್ಠೆಯ (Pran Prathistha ceremony)ಸಂದರ್ಭದಲ್ಲಿ ಶ್ರೀರಾಮ ಇಡೀ ಜಗತ್ತಿನ ದರ್ಶನ ನೀಡಿದ್ದು, ರಾಮಭಕ್ತರು ಶ್ರೀರಾಮನನ್ನು ಆನಂದಭಾಷ್ಪದಿಂದಲೇ ಕಣ್ತುಂಬಿಕೊಂಡರು. ಇತ್ತ ಪ್ರಾಣಪ್ರತಿಷ್ಠೆ ಬಳಿಕ ಶ್ರೀರಾಮನಿಗೆ ಸುತ್ತು ಬಂದ ಪ್ರಧಾನಿಯವರು ಸಾಷ್ಟಾಂಗ ನಮಸ್ಕಾರವನ್ನು ಮಾಡಿದರು. ನಂತರ ಸಾಧುಗಳಿಂದ ಆಶೀರ್ವಾದವನ್ನು ಪಡೆದುಕೊಂಡರು. ಇದಾದ ಬಳಿಕ ಮೋದಿಯವರು ವೇದಿಕೆಯತ್ತ ತೆರಳಿದರು.
Advertisement
ಇಂದಿನ ಈ ಕಾರ್ಯಕ್ರಮಕ್ಕೆ ಸಿನಿ ತಾರೆಯರು, ರಾಜಕೀಯ ವ್ಯಕ್ತಿಗಳು, ರಾಮಭಕ್ತರು ಸೇರಿದಂತೆ ಸಾಕಷ್ಟು ಜನ ಸಾಕ್ಷಿಯಾದರು. ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಹಬ್ಬದ ವಾತಾವರಣವೇ ನಿರ್ಮಾಣ ಆಗಿದೆ. ಅಯೋಧ್ಯೆಯಲ್ಲಿ ಇಂದು ರಾಮ ಮತ್ತೆ ಹುಟ್ಟಿ ಬಂದಂತೆ ಎಲ್ಲಾ ಕಡೆಗಳಲ್ಲಿಯೂ ಸಂಭ್ರಮಿಸಲಾಗುತ್ತಿದೆ.