ನವದೆಹಲಿ: ಕೆಚ್ಚೆದೆಯ ಭಾರತೀಯ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ನರೇಂದ್ರ ಮೋದಿ, ಉಗ್ರರ ದಾಳಿ ವಿರುದ್ಧ ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ ಉಗ್ರರ ವಿರುದ್ಧ ಗುಡುಗಿರುವ ಪ್ರಧಾನಿ ಮೋದಿ, ಪುಲ್ವಾಮದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿರುವುದು ತೀವ್ರವಾಗಿ ಖಂಡಿಸುತ್ತೇನೆ. ಹುತಾತ್ಮ ಯೋಧರ ಕುಟುಂಬದ ಜೊತೆಗೆ ಈಡಿ ದೇಶವೇ ನಿಂತಿದೆ. ಗಾಯಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ವಿಡಿಯೋ ರಿಲೀಸ್ ಆಗೋ ವೇಳೆ ನಾನು ಸ್ವರ್ಗದಲ್ಲಿ ಇರ್ತೀನಿ: ನರಹಂತಕ ಉಗ್ರ
Advertisement
Attack on CRPF personnel in Pulwama is despicable. I strongly condemn this dastardly attack. The sacrifices of our brave security personnel shall not go in vain. The entire nation stands shoulder to shoulder with the families of the brave martyrs. May the injured recover quickly.
— Narendra Modi (@narendramodi) February 14, 2019
Advertisement
ಈ ದಾಳಿಯ ಕುರಿತು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹಾಗೂ ಉನ್ನತ ಅಧಿಕಾರಗಳ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದ ನಂತ್ರ ಗುಂಡಿನ ದಾಳಿ: 2,547 ಸೈನಿಕರು ಟಾರ್ಗೆಟ್, 100 ಮೀಟರ್ ದೂರಕ್ಕೆ ಹಾರಿತು ದೇಹ!
Advertisement
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ಆರಂಭಿಸಿದ್ದಾರೆ. ಈಗಾಗಲೇ ಉನ್ನತ ಅಧಿಕಾರಿಗಳು ದೆಹಲಿ ಕಡೆಗೆ ಆಗಮಿಸುತ್ತಿದ್ದು, ಮುಂದಿನ ಕ್ರಮಕ್ಕೆ ಮಾತುಕತೆ ನಡೆಸಲಿದ್ದಾರೆ ಎಂದು ಸರ್ಕಾರ ಮೂಲಗಳಿಂದ ತಿಳಿದುಬಂದಿದೆ.
Advertisement
Spoke to Home Minister Rajnath Singh Ji and other top officials regarding the situation in the wake of the attack in Pulwama.
— Narendra Modi (@narendramodi) February 14, 2019
ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಗೌಭ ವಾರ್ಷಿಕ ಕಾರ್ಯದರ್ಶಿಗಳ ಮಾತುಕತೆಗೆ ಭುತಾನ್ಗೆ ಇಂದು ತೆರಳಿದ್ದರು. ಉಗ್ರರ ದಾಳಿ ಬಳಿಕ ಭುತಾನ್ನಿಂದ ಭಾರತಕ್ಕೆ ಮರಳಿದ್ದಾರೆ.
National Security Advisor Ajit Doval is monitoring the situation in Kashmir post #PulwamaAttack, Senior CRPF officials are briefing him on the situation (file pic) pic.twitter.com/5XDqrSQ6vC
— ANI (@ANI) February 14, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv