-ಧಾರವಾಡ ಐಐಟಿ ಕಾರ್ಯಕ್ರಮದಲ್ಲಿ ಅಪರೂಪದ ಘಟನೆ
ಹುಬ್ಬಳಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅಪರೂಪದ ಘಟನೆ ಧಾರವಾಡದ (Dharwad) ಐಐಟಿ (IIT) ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದಿದೆ.
Advertisement
Advertisement
ನರೇಂದ್ರ ಮೋದಿಯವರನ್ನು ಕಂಡು ಭಾವೋದ್ರೇಕಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಸಹ ನಮಸ್ಕರಿಸಿದ ಕಾರ್ಯಕರ್ತನ ಕಾಲಿಗೆ ವಾಪಸ್ ನಮಸ್ಕರಿಸಿದ್ದಾರೆ. ಇದನ್ನೂ ಓದಿ: ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ: ಡಿಕೆಶಿಗೆ ಜಾರಕಿಹೊಳಿ ಟಾಂಗ್
Advertisement
Advertisement
ಹುಬ್ಬಳಿ (Hubballi) ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ (Bajarangadala) ಮುಖಂಡ ಚೇತನ್ ರಾವ್ ಮೋದಿಗೆ ಕಾಲಿಗೆ ಬಿದ್ದವರು. ಹಲವಾರು ವರ್ಷಗಳಿಂದ ಹಿಂದೂ ಪರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಚೇತನ್ ರಾವ್, ವೃತ್ತಿಯಲ್ಲಿ ಆರ್ಕಿಟೆಕ್ಚರ್ ಆಗಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ಭೇಟಿಗೆ ಈ ಬಾರಿ ವಿಶೇಷ ಅವಕಾಶವನ್ನು ಚೇತನ್ ರಾವ್ ಮತ್ತು ರಘು ಎಂಬವರಿಗೆ ನೀಡಲಾಗಿತ್ತು.
ಪ್ರತಿಯಾಗಿ ಮೋದಿಯವರು ನಮಸ್ಕರಿಸುವಾಗ ಪಕ್ಕದಲ್ಲೇ ಇದ್ದ ರಘು, ಮೋದಿ ಅವರನ್ನು ತಡೆಯಲು ಮುಂದಾಗಿದ್ದರು. ಭದ್ರತಾ ಸಿಬ್ಬಂದಿ ರಘು ಅವರನ್ನು ತಡೆದಿದ್ದಾರೆ. ಮೋದಿ ಕಾಲಿಗೆ ಬಿದ್ದಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: Oscars- ‘ಆಸ್ಕರ್’ ವಿಜೇತರಿಗೆ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ