ನವದೆಹಲಿ: ಮುಂಬರುವ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀಲಂಕಾಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದು ಭಾರತ-ಶ್ರೀಲಂಕಾ ಸಂಬಂಧಗಳ ಸುಧಾರಣೆಯ ಬಲವಾದ ಸಂಕೇತವಾಗಿದೆ. ಶ್ರೀಲಂಕಾದಲ್ಲಿ (Srilanka) ಭಾರತೀಯ ಭದ್ರತಾ ಸಿಬ್ಬಂದಿ ಹಿಂಪಡೆದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.
ಶ್ರೀಲಂಕಾ ಅಧ್ಯಕ್ಷ ಅನುರಾ ದಿಸನಾಯಕ ಅವರು ಕಳೆದ ಡಿಸೆಂಬರ್‌ನಲ್ಲಿ ದೆಹಲಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರ ಭೇಟಿ ನಡೆಯಲಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ 2015, 2017 ಮತ್ತು 2019ರಲ್ಲಿ ಮೂರು ಬಾರಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.ಇದನ್ನೂ ಓದಿ: ಬಾಯಿಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಬಂದ ಜಾನ್ವಿ ಕಪೂರ್
ನಾಗಪಟ್ಟಣಂ ಅನ್ನು ತ್ರಿಕೋನಮಲಿಯೊಂದಿಗೆ ಸಂಪರ್ಕಿಸುವ ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್‌ಲೈನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಕೂಡ ಮುಂದುವರಿಯುವ ಸಾಧ್ಯತೆಯಿದೆ. ಈ ಯೋಜನೆಯಲ್ಲಿ ಭಾರತೀಯ ತೈಲ ನಿಗಮವು ಪ್ರಮುಖ ಪಾತ್ರ ವಹಿಸಿದೆ.ಇದನ್ನೂ ಓದಿ: ಮೈಸೂರು ಮಹಾರಾಜರ ಕುಟುಂಬ ರಕ್ಷಿಸಿದ್ದ `ಶ್ಯಾಡೋ’ ಚಿರತೆ ದಿಢೀರ್ ಸಾವು