ನವದೆಹಲಿ: ಮೂರು ದಿನಗಳ ಕಾಲ ಅಮೇರಿಕ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಹೊರಡುವ ಮುನ್ನ ಇಸ್ರೇಲ್-ಹಮಾಸ್ ಯುದ್ಧ ಮತ್ತು ಉಕ್ರೇನ್ (Ukraine) ಬಿಕ್ಕಟ್ಟು ಸೇರಿದಂತೆ ಜಾಗತಿಕ ಸಂಘರ್ಷಗಳ ಹಿನ್ನೆಲೆ ಯುಎನ್‌ನ (UN) ಭವಿಷ್ಯದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಯಾವ ದಿನ ಏನು?
ಮೊದಲ ದಿನ ಅಮೇರಿಕಾದ (America) ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು.ಇದನ್ನೂ ಓದಿ: ಅತ್ಯಾಚಾರ ವಿರೋಧಿಸಿದ್ದಕ್ಕಾಗಿ ಪ್ರಾಂಶುಪಾಲನಿಂದ 6 ವರ್ಷದ ಬಾಲಕಿಯ ಕೊಲೆ
Advertisement
Advertisement
ಎರಡನೇ ದಿನ ಶನಿವಾರ ನ್ಯೂಯಾರ್ಕ್‌ಗೆ ಆಗಮಿಸಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು.
Advertisement
ಮೂರನೇ ದಿನ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
Advertisement
This has been a fruitful USA visit, covering diverse programmes and focusing on a series of subjects aimed at making our planet better. Here are the highlights. pic.twitter.com/JXKS0XKDps
— Narendra Modi (@narendramodi) September 24, 2024
ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಸಭೆಯಲ್ಲಿ, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಪರಿಹರಿಸಲು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಬದ್ಧತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿದರು.
After a fruitful visit to the US, PM @narendramodi emplanes for New Delhi. pic.twitter.com/0pjaTRHZY3
— PMO India (@PMOIndia) September 24, 2024
ಮೂರು ತಿಂಗಳ ಅವಧಿಯಲ್ಲಿ ಉಭಯ ನಾಯಕರ ನಡುವಿನ ಮೂರನೇ ಸಭೆ ಇದಾಗಿದೆ. ಮೋದಿ ಕೊನೆಯ ಬಾರಿಗೆ ಉಕ್ರೇನ್ ರಾಜಧಾನಿ ಕೀನಲ್ಲಿ ಆ.23 ರಂದು ಭೇಟಿ ನೀಡಿದ್ದರು. ಜೂನ್‌ನಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದರು.ಇದನ್ನೂ ಓದಿ: ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ