ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ನೀಡಿದ ಹೇಳಿಕೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸಂಸತ್ತೇ ಒಂದು ಬಾರಿ ನಗೆಗಡಲಲ್ಲಿ ತೇಲಿದ ಪ್ರಸಂಗವೊಂದು ನಡೆದಿದೆ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ (Budget Session) ಮಾತನಾಡುತ್ತಾ ಪ್ರಧಾನಿ ಮೋದಿಯವರತ್ತ ನೋಡಿ, ನಿಮಗೆ ಬಹುಮತ ಇದೆ. ಈ ಹಿಂದೆ 330-340 ಅವರು ಸ್ಥಾನಗಳನ್ನು ಹೊಂದಿದ್ರಿ. ಈ ಬಾರಿ ಅದು 400 ದಾಟುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನು ಕೇಳಿ ಬಿಜೆಪಿ (BJP) ನಾಯಕರು ಜೋರಾಗಿ ಚಪ್ಪಾಳೆ ತಟ್ಟಿದ್ದು, ಸಂಸತ್ ಭವನ ನಗೆಗಡಲಲ್ಲಿ ಮುಳುಗಿತು. ಸ್ವತಃ ಪ್ರಧಾನಿ ಮೋದಿಯವರು (Narendra Modi) ಕೂಡ ಜೋರಾಗಿ ನಗತೊಡಗಿದರು. ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
PM Modi be like, "I need new haters, the old ones have become my fans…" pic.twitter.com/dnpc5e0vI9
— BJP (@BJP4India) February 2, 2024
Advertisement
ವೀಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ‘400 ಪಾರ್’ ಕೇಳಿದ ನಂತರ ಪ್ರಧಾನಿ ಮೋದಿ ನಗಲು ಆರಂಭಿಸಿದ್ದಾರೆ. ಜೊತೆಗೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಘೋಷಣೆ ಕೂಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ
Advertisement
2024ರ ಲೋಕಸಭೆ ಚುನಾವಣೆಯಲ್ಲಿ (Loksabha Election 2024) ಬಿಜೆಪಿ ಗೆದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದನ್ನು ರಾಜ್ಯಸಭೆಯಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಭವಿಷ್ಯ ನುಡಿದಿದ್ದಾರೆ ಎಂದು ಖರ್ಗೆಯವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತ ಬಿಜೆಪಿಯವರು ಕೂಡ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದೆ.
Advertisement
ಅಬ್ ಕಿ ಬಾರ್ ಚಾರ್ ಸೌ ಪಾರ್: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್ (ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ ಬಿಜೆಪಿ ದಾಟಲಿದೆ 400 ಸ್ಥಾನ) ಎಂಬ ಹೊಸ ಘೋಷ ವಾಕ್ಯವನ್ನು ಬಳಸಲು ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಇನ್ನೂ ಅಧಿಕೃತವಾಗಿ ಬಿಜೆಪಿ ಘೋಷಿಸಿಲ್ಲ.
ಹಿಂದೆ ಏನಿತ್ತು?
2014- ಅಚ್ಛೇದಿನ್ ಆನೇ ವಾಲೆ ಹೈ (ಒಳ್ಳೆಯ ದಿನಗಳು ಬರಲಿವೆ)
2019 – ಫಿರ್ ಏಕ್ ಬಾರ್ ಮೋದಿ ಸರ್ಕಾರ್ (ಮತ್ತೊಂದು ಬಾರಿ ಮೋದಿ ಸರ್ಕಾರ್)