ಬೆಂಗಳೂರು: ಏರೋ ಇಂಡಿಯಾ (Aero India 2023) ಶೋ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ.
ಇಂದು ರಾತ್ರಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ (Narendra Modi) ಅವರನ್ನು ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸೇರಿ ಹಲವರು ಸ್ವಾಗತಿಸಿದರು. ಸದ್ಯ ಪ್ರಧಾನಮಂತ್ರಿಗಳು ರಾಜಭವನದಲ್ಲಿ (Raj Bhavan) ತಂಗಿದ್ದು, ರಾಜಭವನದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಪ್ರಧಾನಿ ಮೋದಿ ಡಿನ್ನರ್ ಸಭೆ ನಡೆಸಿದ್ದಾರೆ.
Advertisement
ಮೋದಿ ಜೊತೆ ಡಿನ್ನರ್ ಸಂವಾದದಲ್ಲಿ ಸಿನಿಮಾ, ಉದ್ಯಮ ಹಾಗೂ ಕ್ರೀಡಾ ವಲಯದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನಟ ಯಶ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್, ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಭಾಗವಹಿಸಿದ್ದರು.
Advertisement
ಮೋದಿ ಜತೆಗಿನ ಸಂವಾದಕ್ಕೆ ಪ್ರತಿಯೊಂದು ತಂಡಕ್ಕೂ 10 ನಿಮಿಷಗಳ ಕಾಲಾವಕಾಶ, ಮಾಡಿಕೊಡಲಾಗಿತ್ತು. ಕ್ರಿಕೆಟರ್ಸ್ ಗೆ 10 ನಿಮಿಷ, ನಟರ ಟೀಂಗೆ 10 ನಿಮಿಷ , ಉದ್ಯಮಿಗಳಿಗೆ 10 ನಿಮಿಷದಂತೆ ಕಾಲಾವಕಾಶ ನೀಡಲಾಗಿತ್ತು.
Advertisement
Advertisement
ಸೋಮವಾರ ಚಾಲನೆ:
ವಿಶ್ವದ ಚಿತ್ತ ಸೆಳೆದಿರುವ ಏರೋ ಇಂಡಿಯಾ ಶೋ 2023ಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಕಾಲ ನಡೆಯೋ ಏರ್ ಶೋಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11:30 ರವರೆಗೂ ಗಗನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ವೀಕ್ಷಣೆ ಮಾಡಲಿದ್ದಾರೆ. ಬೆಳಗ್ಗೆ 11.45 ಕ್ಕೆ ಯಲಹಂಕ ವಾಯುನೆಲೆಯಿಂದಲೇ ತ್ರಿಪುರಾ ಚುನಾವಣಾ ಪ್ರಚಾರಕ್ಕಾಗಿ ಅಗರ್ತಲಾಗೆ ಪ್ರಧಾನಿ ಮೋದಿ ಪಯಣ ಬೆಳೆಸಲಿದ್ದಾರೆ. ಇದನ್ನೂ ಓದಿ: ದೇಶದ ಅತಿದೊಡ್ಡ ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ
ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಫೆ.17ರವರೆಗೂ ಕೆಐಎಎಲ್‍ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೆಬ್ಬಾಳ ಫ್ಲೈಓವರ್ ಬಂದ್ ಮಾಡಿರುವ ಕಾರಣ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣ ಏರ್ಪಡುತ್ತಿದೆ. ನಾಳೆಯಿಂದ ಏರ್ ಶೋ ನೋಡಲು ಸಾವಿರಾರು ಜನ ಬರುವ ಹಿನ್ನೆಲೆಯಲ್ಲಿ ವಾಹನದಟ್ಟಣೆ ಇನ್ನಷ್ಟು ಹೆಚ್ಚಲಿದೆ.
ಈ ಸಲದ ಏರ್ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ವೀಕ್ಷಕರು ಆಸ್ವಾದಿಸಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟು ದೇಶೀಯ ಹಾಗೂ ವಿದೇಶಿ 731 ಪ್ರದರ್ಶಕರು ಭಾಗವಹಿಸಲಿದ್ದಾರೆ. ಏರೋಸ್ಪೇಸ್, ಭಾರತೀಯ ವಾಯುಪಡೆ ಮತ್ತು ರಕ್ಷಣಾ ವಲಯದ ಟ್ರೇಡ್ ಎಕ್ಸ್‌ಪೋ ಕೂಡ ನಡೆಯಲಿದೆ. ಏರೋಸ್ಪೇಸ್ ವಲಯದ ಹೂಡಿಕೆದಾರರು, ಪರಿಣತರು ಕೂಡ ಪಾಲ್ಗೊಳ್ಳಲಿದ್ದಾರೆ. ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನ ನಡೆಯಲಿದೆ.
ಮೋದಿಯವರು ಒಂದೇ ವಾರದಲ್ಲಿ ಎರಡನೇ ಬಾರಿಗೆ ಭೇಟಿ ಕೊಡುತ್ತಿದ್ದಾರೆ. ಫೆ.6 ರಂದು ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದರು. ಕರ್ನಾಟಕ ಎಲೆಕ್ಷನ್ ಸಮೀಪ ಸಿಲಿಕಾನ್ ಸಿಟಿ ಮತದಾರರ ಮೇಲೆ ಮೋದಿ ಮೂಲಕ ಪ್ರಭಾವ ಬೀರಲು ಬಿಜೆಪಿ ಕಸರತ್ತು ನಡೆಸಿದೆ. ನಗರದ ಮೂಲಸೌಕರ್ಯ ಕಾಮಗಾರಿಗಳ ವಿಳಂಬದಿಂದ ಹಲವು ಕಡೆ ಆಡಳಿತ ವಿರೋಧಿ ಅಲೆ ಸವಾಲು ಉದ್ಭವಿಸಿದೆ. ಬೆಂಗಳೂರಿನಲ್ಲಿ ಮೋದಿ ಅಲೆ ಸೃಷ್ಟಿಸಿ ಜನಾಕ್ರೋಶ ತಣಿಸಲು ಬಿಜೆಪಿ ತಂತ್ರ ಹೆಣೆದಿದೆ. ಮುಂದೆಯೂ ನಗರದಲ್ಲಿ ಮೋದಿ ರೋಡ್ ಶೋ, ರ್‍ಯಾಲಿ ಆಯೋಜಿಸಿ ಆ ಮೂಲಕ ನಗರದ ಮತ ವರ್ಗ ಸೆಳೆಯಲು ಪ್ಲಾನ್ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k