ನರೇಂದ್ರ ಮೋದಿ ದೇಶದಲ್ಲೇ ನಂಬರ್ 1 ನಾಯಕ: ಜಿ.ಟಿ.ದೇವೇಗೌಡ

Public TV
1 Min Read
Narendra Modi G.T.Deve gowda

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿಯೇ ನಂಬರ್ 1 ನಾಯಕ. ಅವರ ವಿರುದ್ಧ ಸರಿಸಮಾನದ ಪರ್ಯಾಯ ನಾಯಕ ಕಾಣುತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನರೇಂದ್ರ ಮೋದಿ ಪ್ರಚಾರ ಮಾಡಿದ್ದರು. ಅಂದು ನೀಡಿದ್ದ ಭರವಸೆಗಳು ಈಡೇರಿಸದೇ ಕೈ ಚೆಲ್ಲಿದ್ದಾರೆ. ಹೀಗಾಗಿ ಈಗ ಗ್ರಾಮೀಣ ಭಾಗದ ಜನರು ಕೂಡ ಪ್ರಜ್ಞಾವಂತರಾಗಿದ್ದು, ಮೋದಿ ಅವರಿಗೆ ಮತ ಹಾಕಲು ಹಿಂದೇಟು ಹಾಕುತ್ತಾರೆ ಎಂದು ಟಾಂಗ್ ಕೊಟ್ಟರು.

GT DEVEGOWDA

ಕೇಂದ್ರದಲ್ಲಿ ಮುಂದಿನ ಅವಧಿಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಜನರ ಬಾಯಲ್ಲಿದೆ. ಕಳೆದ ಬಾರಿ ಜೋರು ಮಳೆ ಎಂಬಂತೆ ಚುನಾವಣೆ ನಡೆಯಿತು. ಜಯಗಳಿಸಿದ ಬಿಜೆಪಿ, ಯುವಕರು, ವಿದ್ಯಾವಂತರನ್ನು ಕಡೆಗಣಿಸಿದೆ. ಅಷ್ಟೇ ಅಲ್ಲದೆ ಉದ್ಯೋಗವಕಾಶ ಕೊಡಲಿಲ್ಲ. ರೈತರ ಬೆನ್ನಿಗೆ ನಿಲ್ಲಲಿಲ್ಲ. ಇದರಿಂದಾಗಿ ಮೋದಿ ಸರ್ಕಾರದಿಂದ ಅಭಿವೃದ್ಧಿ ಆಗುವುದಿಲ್ಲ ಎನ್ನುವುದು ಜನರ ಅರಿವಿಗೆ ಬಂದಿದೆ ಎಂದು ಸಚಿವರು ಹೇಳಿದರು.

modi 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article