ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ (Narendra Modi) ವಿಷ ಸರ್ಪ ಅಲ್ಲ (Venomous Snake), ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪ (King Cobra) ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (DR.K. Sudhakar) ಚಿಕ್ಕಬಳ್ಳಾಪುರದಲ್ಲಿ (Chikkaballapur) ಶನಿವಾರ ಹೇಳಿದ್ದಾರೆ.
ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿ ಚೋಕಿದಾರ್ ಚೋರ್ ಅಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ವಿಷ ಸರ್ಪ ಎಂದಿದ್ದಾರೆ. ಆದರೆ ನರೇಂದ್ರ ಮೋದಿ ವಿಷ ಸರ್ಪ ಅಲ್ಲ, ದೇಶದ 140 ಕೋಟಿ ಜನರ ಖಜಾನೆ ರಕ್ಷಣೆ ಮಾಡುವ ಕಾಳಿಂಗ ಸರ್ಪ ಎಂದರು. ಇದನ್ನೂ ಓದಿ: ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ- ಸಿದ್ದರಾಮಯ್ಯ
ಪುರಾತನ ದೇವಸ್ಥಾನಗಳ ಖಜಾನೆಗಳನ್ನ ರಕ್ಷಣೆ ಮಾಡುವುದು ಕಾಳಿಂಗ ಸರ್ಪಗಳು. ಈಗ ದೇಶದ 140 ಕೋಟಿ ಜನರ ತೆರಿಗೆಯ ಹಣ ಖಜಾನೆಯನ್ನು ಕಾಪಾಡುತ್ತಿರುವುದು ನರೇಂದ್ರ ಮೋದಿ ಎಂಬ ಕಾಳಿಂಗ ಸರ್ಪವೇ ಹೊರತು, ವಿಷ ಸರ್ಪ ಅಲ್ಲ. 130 ಕೋಟಿ ಜನರಿಗೆ ಕೊರೊನಾ ಲಸಿಕೆ (COVID-19 vaccines) ಎಂಬ ಅಮೃತ ಕೊಟ್ಟ ಅವರನ್ನು ವಿಷ ಸರ್ಪ ಎನ್ನುತ್ತೀರಾ ಎಂದು ಕುಟುಕಿದರು.
ಕಾಂಗ್ರೆಸ್‍ನವರ (Congress) ವಿಷವನ್ನು ಕಂಠದಲ್ಲಿ ಇಟ್ಟುಕೊಂಡಿರುವ ನಂಜುಡೇಶ್ವರ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸುವುದು ಸರಿಯಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ