– ಮೋದಿಗಿಂತ ನಾನು ದೊಡ್ಡವನು
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನಾಥೂರಾಮ್ ಗೋಡ್ಸೆ ವಂಶಸ್ಥ. ಅವನು ಆರ್‌ಎಸ್‌ಎಸ್ ಇವನು ಆರ್‌ಎಸ್‌ಎಸ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಮಾತು ಎತ್ತಿದ್ದರೆ ಮನ್ ಕೀ ಬಾತ್ ಎನ್ನುತ್ತಾರೆ. ಅವರು ಬಡವರಿಗೆ ಏನು ಕೊಟ್ಟಿದ್ದಾರೆ. ನಾನು ಇಂದಿರಾ ಕ್ಯಾಂಟೀನ್ ಅಕ್ಕಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಜನರಿಗೆ ನೀಡಿದ್ದೇನೆ ಎಂದರು.
Advertisement
Advertisement
ಬಿಜೆಪಿಯವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾತು ಎತ್ತಿದ್ದರೆ ಮೋದಿ ಮೋದಿ ಎನ್ನುತ್ತಾರೆ. ನೀವು ಪಕ್ಕದ ಮನೆಯವರಿಗೂ ಹೇಳಿ, ಕಾಲು ಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ತಿಳಿಸಿದರು.
Advertisement
ಪ್ರಧಾನಿ ಮೋದಿ ಅವರಿಂದ ನಾನು ದೇಶಭಕ್ತಿಯ ಬಗ್ಗೆ ಕಲಿಯಬೇಕಾಗಿಲ್ಲ. ನಾನು ಅವರಿಗಿಂತ ದೊಡ್ಡವನು. ಪ್ರಧಾನಿ ಮೋದಿ ತಮ್ಮ ಆಡಳಿತ ಅವಧಿಯಲ್ಲಿ ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ದೇಶದ ರಕ್ಷಣೆಗೆ ಶ್ರಮಿಸಿದ ಯೋಧರಿಗೆ ಸಲಾಂ ಹೇಳಬೇಕು ಅದನ್ನು ಬಿಟ್ಟು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
Advertisement
ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೂ ಅವರಿಗೆ ದೊಡ್ಡ ಶಿಕ್ಷೆ ಆಯ್ತು. ಅವರು ಏನು ಕೇಳಿದರೂ ನಾನು ಕೊಟ್ಟಿದ್ದೇನೆ. ಲಕ್ಷ್ಮೇಶ್ವರವನ್ನು ತಾಲೂಕು ಮಾಡಿದೆ. ಬಿಜೆಪಿ ಅವರು ಏನು ಮಾಡಿದರು? ಬಿಜೆಪಿಯವರು ಕೇಂದ್ರದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಿರ್ವಹಿಸಿದ್ದಾರೆ. ಅವರು ದೇಶದ ಜನತೆ ಏನು ಕೆಲಸ ಮಾಡಿದ್ದೇವೆ ಎನ್ನುವುದನ್ನೇ ಹೇಳುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ಶಿವಕುಮಾರ್ ಉದಾಸಿ ಅವರು ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಶಿವಕುಮಾರ್ ಉದಾಸಿ ಹಾಗೂ ನರೇಂದ್ರ ಮೋದಿ ಅವರು ಯಾವುದೇ ಕೆಲಸ ಮಾಡಿಲ್ಲ. ನರೇಂದ್ರ ಮೋದಿ ಬಾಯಿ ಬಿಟ್ಟರೇ ಸುಳ್ಳು ಹೇಳುತ್ತಾರೆ.
ಕಾಂಗ್ರೆಸ್‍ನಲ್ಲಿ ಹಿಂದುಳಿದ ವರ್ಗದ 10 ಜನರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿಯವರು ಕುರುಬರು, ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಹೀಗೆ ಮಾಡಿದರೆ ಸಬ್ ಕಾ ಸಾಥ್ ಸಬ್ ವಿಕಾಸ್ ಆಗುತ್ತದೆ ಎಂದು ಪ್ರಶ್ನಿಸಿದರು.
ನಿಮ್ಮಲ್ಲಿ ಬಿಜೆಪಿ ನಾಶಮಾಡಬೇಕು ಎನ್ನುವಷ್ಟು ಕೋಪ ಬರಬೇಕು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಕುರುಬ ಸಮುದಾಯದ ಒಬ್ಬ ನಾಯಕರಿಗೆ ಟಿಕೆಟ್ ಕೊಡಿಸದ ಬಿಜೆಪಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಅವರು ಒಂದು ಬಾರಿ ನಾನೇ ಮುಂದಿನ ಮುಖ್ಯಮಂತ್ರಿಯಾಗೋದು ಅಂತ ಹೇಳಲಿ. ಹೀಗೆ ಹೇಳಲು ಧಮ್ ಬೇಕು ಎಂದು ಕೆ.ಎಸ್.ಈಶ್ವರಪ್ಪ ಅವರಿಗೆ ಸವಾಲು ಹಾಕಿದರು.