ನವದೆಹಲಿ: 2047 ಗಮನದಲ್ಲಿಟ್ಟುಕೊಂಡು ಇನ್ನಷ್ಟು ಕೆಲಸ ಮಾಡುವುದು ಬಾಕಿ ಇದೆ. 2024 ಚುನಾವಣೆ ಬೇರೆ, 2047 ಬೇರೆ. 2047 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷವಾಗಲಿದೆ. ಈ ಅವಧಿಗೆ ಮಾಡಬೇಕಾದ ಕೆಲಸಗಳ ಗುರಿ ಇರಬೇಕು ಎಂದು ಹೇಳುತ್ತಾ ಮುಂದಿನ 25 ವರ್ಷಕ್ಕೆ ತಯಾರಿಯ ಬಗ್ಗೆ ಪ್ರಧಾನಿ ಮೋದಿ (Narendra Modi) ಮಾತನಾಡಿದರು.
ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೆಚ್ಚಿನ ಸರ್ಕಾರಗಳು ಎಲ್ಲವನ್ನು ಮಾಡಿದೆ ಎಂದುಕೊಳ್ಳುತ್ತವೆ. ಆದರೆ ನಾನು ಹಾಗೇ ಅಂದುಕೊಳ್ಳುವುದಿಲ್ಲ. ನಾನು ಮಾಡುವುದು ಇನ್ನು ಬಾಕಿ ಇದೆ. ಬಹಳಷ್ಟು ಕುಟುಂಬಗಳ ಕನಸು ನನಸು ಮಾಡಬೇಕಿದೆ. ನಾನು ಸಿಎಂ ಆಗಿದ್ದಾಗ ಚುನಾವಣೆಯಿಂದ ಸಮಸ್ಯೆಯಾಗುತ್ತಿತ್ತು. ಹಿರಿಯ ಅಧಿಕಾರಿಗಳು ಬೇರೆ ರಾಜ್ಯಗಳಿಗೂ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದರು. ಇದರಿಂದ ನನ್ನ ಕೆಲಸಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ನಾನು ಚುನಾವಣೆಗೂ ಮುನ್ನ ನೂರು ದಿನಗಳ ತಯಾರಿ ಮಾಡುತ್ತಿದ್ದೆ ಎಂದು ಹೇಳಿದರು.
Advertisement
Advertisement
ಈಗ ಮುಂದಿನ 25 ವರ್ಷಕ್ಕೆ ನಾನು ತಯಾರಿ ಮಾಡಿಕೊಂಡಿದ್ದೇನೆ. ವಲಯವಾರು ವಿಶೇಷ ತಂಡಗಳನ್ನು ರಚಿಸಿದ್ದೇನೆ. ಜನರಿಂದ ಸಲಹೆ ಪಡೆದುಕೊಂಡಿದ್ದೇನೆ. 15-20 ಲಕ್ಷ ಜನರು ಸಲಹೆ ನೀಡಿದ್ದಾರೆ, ಇದನ್ನು ಡಾಕ್ಯುಮೆಂಟ್ ಮಾಡಿದ್ದೇನೆ. ಚುನಾವಣೆ ಬಳಿಕ ಕೆಲಸ ಶುರು ಮಾಡಲಿದ್ದೇನೆ. ಎಲ್ಲ ರಾಜ್ಯಗಳಲ್ಲಿ ಆಗಬೇಕಿರುವ ಕೆಲಸ ಮಾಡಬೇಕು. ಬಿಜೆಪಿ ಪ್ರಣಾಳಿಕೆ (BJP Manifesto), 25 ವರ್ಷದ ಮಿಷನ್. ಮುಂದಿನ ಐದು ವರ್ಷದ ಕೆಲಸಗಳನ್ನು ವಿಭಾಗಿಸುತ್ತೇನೆ ಎಂದರು.
Advertisement
ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ. ಯಾರಿಗೂ ಹೆದರುವ ಅಗತ್ಯ ಇಲ್ಲ. ಯಾರನ್ನೂ ಹೆದರಿಸಲು ಅಥವಾ ಯಾರನ್ನೂ ಕಡಿಮೆ ಮಾಡಲು ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆ ನಿರ್ಧಾರಗಳು ದೇಶದ ಸವಾರ್ಂಗೀಣ ಅಭಿವೃದ್ಧಿಗಾಗಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಕೈಗೊಂಡಿದ್ದ 11 ದಿನಗಳ ವ್ರತದ ಟೀಕೆಗೆ ಮೋದಿ ಉತ್ತರ
Advertisement
#WATCH | On his ‘Vision 2047 ‘ for the country, PM Modi says, “This is not just Modi's vision, the ownership of this vision belongs to the whole country…I don’t want to waste even a minute…" pic.twitter.com/Jih70EEwuF
— ANI (@ANI) April 15, 2024
ಚುನಾವಣೆಯನ್ನು ಲಘುವಾಗಿ ಸ್ವೀಕರಿಸಬಾರದು. ಇದು ಪ್ರಜಾಪ್ರಭುತ್ವ ಉತ್ಸವ. ಚುನಾವಣೆಯಲ್ಲಿ ನಾನು ಮಾತ್ರ ಅಲ್ಲ ಪ್ರತಿಯೊಬ್ಬ ಮತದಾರ, ಬೂತ್ ಕಾರ್ಯಕರ್ತ, ಅಭ್ಯರ್ಥಿಯೂ ಮುಖ್ಯ. ಒಬ್ಬರು ಇಲ್ಲದಿದ್ದರೂ ಚುನಾವಣೆ ನಡೆಯಲ್ಲ ಎಂದು ಮೋದಿ ಹೇಳಿದರು.
ಕಳೆದ ಬಾರಿ ಅಧಿಕಾರ ಬಂದ ನೂರು ದಿನದಲ್ಲಿ 370 ರದ್ದು ಮಾಡಿತು. ತ್ರಿವಳಿ ತಲಾಕ್ ರದ್ದು ಮಾಡಲಾಯಿತು. ಬ್ಯಾಂಕ್ ಗಳ ಮರ್ಜ್ ಮಾಡಲಾಯಿತು. ಒಂದು ರಾಷ್ಟ್ರ ಒಂದು ಚುನಾವಣೆ ನಮ್ಮ ಬದ್ಧತೆ. ದೇಶದಲ್ಲಿ ಇದರ ಪರವಾಗಿ ಅನೇಕ ಜನರು ಮುಂದೆ ಬಂದಿದ್ದಾರೆ. ಅನೇಕ ಜನರು ತಮ್ಮ ಸಲಹೆಗಳನ್ನು ಸಮಿತಿಗೆ ನೀಡಿದ್ದಾರೆ. ಈ ವರದಿಯನ್ನು ಕಾರ್ಯಗತಗೊಳಿಸಲು ಸಮರ್ಥರಾದರೆ ದೇಶಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.