ಅರುಣಾಚಲ ಪ್ರದೇಶದಲ್ಲಿ ಕಿರಿಕ್‌ ಚೀನಾಗೆ ಠಕ್ಕರ್‌ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ

Public TV
2 Min Read
PM Narendra Modi inaugurates Sela Tunnel All you need to know about worlds longest twin lane passageway near China border

ಇಟಾನಗರ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಿರ್ಮಾಣಗೊಂಡ ವಿಶ್ವದ ಅತೀ ಉದ್ದದ ದ್ವಿಪಥ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಿದ್ದಾರೆ.

ಇಟಾನಗರದಲ್ಲಿ (Itanagar) ನಡೆದ ʼವಿಕಾಸಿತ ಭಾರತ ವಿಕಾಸಿತ ಈಶಾನ್ಯʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಸೆಲಾ ಸುರಂಗವನ್ನು (Sela Tunnel) ಉದ್ಘಾಟಿಸಿದರು. ಈ ಸಮಯದಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು.

PM Narendra Modi inaugurates Sela Tunnel All you need to know about worlds longest twin lane passageway near China border 1

ಚೀನಾಗೆ ಠಕ್ಕರ್‌ ಹೇಗೆ?
ಚೀನಾ ಗಡಿ (China Border) ಭಾಗದಲ್ಲಿ ವಿಶೇಷವಾಗಿ ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗದ ಕಾರಣ ರಾಜ್ಯಗಳು ಹಿಂದುಳಿದಿತ್ತು. ಅಷ್ಟೇ ಅಲ್ಲದೇ ಗಡಿ ಭಾಗಕ್ಕೆ ಕ್ಷೀಪ್ರವಾಗಿ ಸೈನಿಕರನ್ನು ಕಳುಹಿಸುವುದು ಸವಾಲಿನ ಕೆಲಸವಾಗಿತ್ತು.

ಅರುಣಾಚಲ ಪ್ರದೇಶದಲ್ಲಿ ಚೀನಾ ಆಗಾಗ ಕ್ಯಾತೆ ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಈ ಯೋಜನೆಯ ಭಾಗವಾಗಿ ಈ ಸೆಲಾ ಸುರಂಗವನ್ನು ನಿರ್ಮಾಣ ಮಾಡಲಾಗಿದೆ.

PM Narendra Modi inaugurates Sela Tunnel All you need to know about worlds longest twin lane passageway near China border 2

ಸುರಂಗ ಮಾರ್ಗದ ವಿಶೇಷತೆ ಏನು?
ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸುವ ಸೆಲಾ ಸುರಂಗವು 13,000 ಅಡಿ ಎತ್ತರದಲ್ಲಿ 825 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಡಿ ರಸ್ತೆಗಳ ಸಂಸ್ಥೆ (BRO) ನಿರ್ಮಾಣ ಮಾಡಿದ್ದು, ಒಂದು ಸುರಂಗ 1,003 ಮೀಟರ್‌ ಉದ್ದವಿದ್ದರೆ ಎರಡನೇ ಸುರಂಗ 1,595 ಮೀಟರ್‌ ಉದ್ದದ ಟ್ವಿನ್‌ಟ್ಯೂಬ್‌ ಹೊಂದಿದೆ.  ಇದನ್ನೂ ಓದಿ: ನಾವು ತ್ಯಾಗ ಮಾಡಿ ಬಂದವರು, ಲೋಕಸಭಾ ಟಿಕೆಟ್ ನನಗೆ ಕೊಡ್ಬೇಕು: ಬಿ.ಸಿ ಪಾಟೀಲ್

ಈ ಯೋಜನೆಯೂ 8.6 ಕಿಮೀ ಉದ್ದದ ಎರಡು ರಸ್ತೆಗಳನ್ನು ಸಹ ಒಳಗೊಂಡಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್‌ ಉದ್ದದ ಲಿಂಕ್‌ ರೋಡ್‌ ಕೂಡ ಇದೆ. ದಿನಕ್ಕೆ 3,000 ಕಾರುಗಳು ಮತ್ತು 2,000 ಟ್ರಕ್‌ಗಳು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಸುರಂಗ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ ಗರಿಷ್ಠ ವೇಗದ ಮಿತಿಯನ್ನು ಹೇರಲಾಗಿದೆ.

ಚೀನಾ ಗಡಿಯಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನದಲ್ಲೂ ಈ ಸಂಪರ್ಕ ಕಲ್ಪಿಸಬಹುದಾಗಿದೆ. ಇದು ಭಾರತ-ಚೀನಾ ಮಧ್ಯೆ ಇರುವ ಗಡಿ ವಾಸ್ತವ ರೇಖೆ (ಎಲ್‍ಎಸಿ) ಬಳಿಯ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆ ಸೈನಿಕರನ್ನು ಕ್ಷಿಪ್ರವಾಗಿ ಕಳುಹಿಸಲು, ಸೇನೆಯ ಭಾರೀ ಗಾತ್ರದ ವಾಹನಗಳ ಸಂಚಾರ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ನೆರವಾಗಲಿದೆ.

ಚಳಿಗಾಲದಲ್ಲಿ ಭಾರೀ ಹಿಮಪಾತ ಸಂಭವಿಸಿದಾಗ ಅರುಣಾಚಲ ಪ್ರದೇಶದ ಹಲವು ಮಾರ್ಗಗಳಲ್ಲಿ ಸಂಚಾರ ಬಂದ್‌ ಆಗುತ್ತದೆ. ಹಿಮಪಾತ ಮತ್ತು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಬಲಿಪರಾ-ಚಾರಿದ್ವಾರ-ತವಾಂಗ್ ರಸ್ತೆಯು ವರ್ಷದ ದೀರ್ಘಾವಧಿಯವರೆಗೆ ಮುಚ್ಚಲ್ಪಟ್ಟಿರುವುದರಿಂದ ಸೆಲಾ ಪಾಸ್ ಬಳಿ ಸುರಂಗ ನಿರ್ಮಾಣದ ಅಗತ್ಯವಿತ್ತು.

ತೇಜ್‌ಪುರದಿಂದ ತವಾಂಗ್‌ಗೆ 90 ಕಿ.ಮೀ ದೂರವಿದ್ದು ಈಗ ಈ ಅಂತರ 12 ಕಿ.ಮೀ ಇಳಿಕೆಯಾಗಿದೆ. ಕನಿಷ್ಠ 1 ಗಂಟೆಯ ಪ್ರಯಾಣದ ಸಮಯ ಉಳಿತಾಯವಾಗಲಿದೆ.

ಫೆಬ್ರವರಿ 2019ರಲ್ಲಿ ಪ್ರಧಾನಿ ಮೋದಿ ಅವರು ಯೋಜನೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದರು. ಕೋವಿಡ್ -19 ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುರಂಗ ನಿರ್ಮಾಣದ ಕೆಲಸ ವಿಳಂಬವಾಗಿತ್ತು. 

Share This Article