ನವದೆಹಲಿ: ನೇತಾಜಿ ಸುಭಾಷ್ ಚಂದ್ರಬೋಸ್ ಅವರ 122ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಮ್ಯೂಸಿಯಂ ಉದ್ಘಾಟನೆ ಮಾಡಿದರು.
ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಪ್ರಧಾನಿ ಮೋದಿ ಅವರು ಬೋಸ್‍ರ ಮ್ಯೂಸಿಯಂ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಜಲಿಯನ್ ವಾಲಾಬಾಗ್, ಮೊದಲ ವಿಶ್ವಯುದ್ಧ ಹಾಗೂ 1857ರ ಭಾರತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮ್ಯೂಸಿಯಂಗಳನ್ನು ಉದ್ಘಾಟನೆ ಮಾಡಿದರು.
Advertisement
Prime Minister @narendramodi inaugurates the #SubhashChandraBose museum at Red Fort in New Delhi#NetajiSubhasChandraBose #NetajiJayanti pic.twitter.com/yZMprBYE9L
— DD News (@DDNewslive) January 23, 2019
Advertisement
ಸುಭಾಷ್ ಚಂದ್ರಬೋಸ್ ಅವರ ವಸ್ತು ಸಂಗ್ರಹಾಲಯದಲ್ಲಿ ಬೋಸರ ಹಾಗೂ ಭಾರತೀಯ ರಾಷ್ಟ್ರೀಯ ಸೇನೆ(ಐಎನ್‍ಎ)ಗೆ ಸಂಬಂಧಿಸಿದ ವಿವಿಧ ಕಲಾಕೃತಿಗಳು ಇಡಲಾಗಿದೆ. ಬೋಸರು ಬಳಿಸಿದ ಕತ್ತಿ, ಕುರ್ಚಿ, ಪದಕಗಳು, ಸಮವಸ್ತ್ರ, ಬ್ಯಾಡ್ಜ್ ಸೇರಿದಂತೆ ಐಎನ್‍ಎ ಗೆ ಸಂಬಂಧಿಸಿದ ಇನ್ನಿತರ ಕಲಾಕೃತಿಗಳು ವಸ್ತುಸಂಗ್ರಾಹಲಯದಲ್ಲಿದೆ.
Advertisement
ವಿಶೇಷವಾಗಿ ವಸ್ತುಸಂಗ್ರಾಹಲಯಕ್ಕೆ ಭೇಟಿ ನೀಡುವ ಸಾರ್ವಜನಿಕರು ಸುಭಾಷ್ ಚಂದ್ರಬೋಸ್ ಬಗ್ಗೆ ತಯಾರಿಸಿರುವ ಸಾಕ್ಷಚಿತ್ರವನ್ನು ನೋಡಬಹುದಾಗಿದೆ. ಈ ಮೂಲಕ ಸ್ವಾತಂತ್ರ್ಯದ ಹೋರಾಟಗಾರರ ಪರಿಕಲ್ಪನೆ ಬಗ್ಗೆ ತಿಳಿಯಬಹುದಾಗಿದೆ. ಈ ಸಾಕ್ಷ್ಯ ಚಿತ್ರಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ.
Advertisement
A tribute to #NetajiSubhasChandraBose
JAI HIND !! pic.twitter.com/OcflSMCnLA
— DD News (@DDNewslive) January 23, 2019
ಜಲಿಯನ್ ವಾಲಾಬಾಗ್ ಮ್ಯೂಸಿಯಂ ಏಪ್ರಿಲ್ 13, 1919 ರಂದು ನಡೆದ ಹತ್ಯಾಕಾಂಡದ ಕುರಿತು ಬೆಳಕು ಚೆಲ್ಲುತ್ತದೆ. ಪಂಜಾಬ್ ಅಮೃತಸರದ ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕದ ಪ್ರತಿಕೃತಿಯನ್ನು ಈ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದೆ. ಉಳಿದಂತೆ ಮೊದಲ ಮಹಾಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಸಾಹಸ ಶೌರ್ಯ ಮತ್ತು ತ್ಯಾಗಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv