ಏಷ್ಯಾದ ಅತೀ ದೊಡ್ಡ ಬಯೋ-ಸಿಎನ್‍ಜಿ ಸ್ಥಾವರ ಉದ್ಘಾಟಿಸಿದ ಮೋದಿ

Public TV
2 Min Read
Bio CNG modi

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಇಂದೋರ್‍ನಲ್ಲಿ ಪುರಸಭೆಯ ಘನ ತ್ಯಾಜ್ಯ ಆಧಾರಿತ ಗೋಬರ್-ಧನ್(ಬಯೋ-ಸಿಎನ್‍ಜಿ) ಸ್ಥಾವರವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.

ಇಂದೋರ್‍ನ ಪುರಸಭೆಯ ಘನತ್ಯಾಜ್ಯ ಆಧಾರಿತ ಗೋಬರ್-ಧನ್ ಸ್ಥಾವರವನ್ನು ಉದ್ಘಾಟಿಸಿದ ಮೋದಿ ದೇಶದ 75 ದೊಡ್ಡ ನಾಗರಿಕ ಸಂಸ್ಥೆಗಳಲ್ಲಿ ಗೋಬರ್-ಧನ್ ಸ್ಥಾವರದಂತಹ ಜೈವಿಕ-ಸಿಎನ್‍ಜಿ ಸ್ಥಾವರಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂಬುದು ನನಗೆ ಸಂತೋಷವಾಗಿದೆ. ಮುಂದಿನ 2 ವರ್ಷಗಳಲ್ಲಿ ಈ ಉಪಕ್ರಮದಿಂದ ದೇಶದ ನಗರಗಳನ್ನು ಸ್ವಚ್ಛ, ಮಾಲಿನ್ಯ ಮುಕ್ತಗೊಳಿಸಲು ಹಾಗೂ ಅವುಗಳನ್ನು ಶುದ್ಧ ಶಕ್ತಿಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

Gobar Dhan plant 2

ಕಠಿಣ ಹವಾಮಾನ ಪರಿಸ್ಥಿತಿ ಹಾಗೂ ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ ರಾಷ್ಟ್ರದ ಸೇವೆಯನ್ನು ಮುಂದುವರಿಸುತ್ತಿರುವ ನೈರ್ಮಲ್ಯ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ. ಸ್ವಚ್ಛ ಭಾರತ್ ಮಿಷನ್ ಕಡೆಗೆ ನಿಮ್ಮ ಬದ್ಧತೆ ಹಾಗೂ ಸಮರ್ಪಣೆಗೆ ನಾವು ಎಂದೆಂದಿಗೂ ಋಣಿಯಾಗಿದ್ದೇವೆ ಎಂದು ನೈರ್ಮಲ್ಯ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮಿರದಲ್ಲಿ ಉಗ್ರನ ಹತ್ಯೆ – ಇಬ್ಬರು ಯೋಧರು ಹುತಾತ್ಮ

ಗೋಬರ್-ಧನ್ ಸ್ಥಾವರದ ವಿಶೇಷತೆಗಳೇನು?
ಗೋಬರ್-ಧನ್ ಸ್ಥಾವರವನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದಿನಕ್ಕೆ 550 ಮೆಟ್ರಿಕ್ ಟನ್ ಘನ ತ್ಯಾಜ್ಯ ಸಂಸ್ಕರಿಸುವ ಸಾಮಥ್ರ್ಯ ಹೊಂದಿದೆ. ಸ್ಥಾವರ ಪ್ರತಿದಿನ 17,500 ಕೆಜಿ ಜೈವಿಕ ಅನಿಲ ಹಾಗೂ 100 ಟನ್ ಉತ್ತಮ ಗುಣಮಟ್ಟದ ಮಿಶ್ರಗೊಬ್ಬರವನ್ನು ಉತ್ಪಾದಿಸುತ್ತದೆ.

Gobar Dhan plant 1

ವಾರ್ಷಿಕವಾಗಿ 1,30,000 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ತಗ್ಗಿಸುವ ಮೂಲಕ ಜನನಿಬಿಡ ನಗರಗಳ ಗಾಳಿಯ ಗುಣಮಟ್ಟವನ್ನು ಶುದ್ಧೀಕರಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ. ಶೇ.100 ರಷ್ಟು ಹಸಿ ತ್ಯಾಜ್ಯದ ಮೂಲಕ ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ಶುದ್ಧ ಮೀಥೇನ್ ಅನಿಲದೊಂದಿಗೆ ಶೇ.96 ರಷ್ಟು ಸಿಎನ್‍ಜಿ ಉತ್ಪಾದಿಸುತ್ತದೆ. ಇದನ್ನೂ ಓದಿ: 40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

ಉತ್ಪತ್ತಿಯಾಗುವ ಜೈವಿಕ ಅನಿಲದ ಶೇ.50 ರಷ್ಟು ಭಾಗವನ್ನು ಸಾರ್ವಜನಿಕ ಸಾರಿಗೆ ವಾಹನಗಳನ್ನು ಚಲಾಯಿಸಲು ಒದಗಿಸಲಾಗುತ್ತದೆ. ಉಳಿದವು ವಿವಿಧ ಕೈಗಾರಿಕೆಗಳಿಗೆ ಲಭ್ಯವಾಗುತ್ತದೆ. ಇಂದೋರ್‍ನಲ್ಲಿ ಸುಮಾರು 400 ಬಸ್‍ಗಳು ಶೀಘ್ರವೇ ಸ್ಥಾವರದಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲದಿಂದ ಚಲಿಸಬಹುದುದಾಗಿವೆ.

gobar dhan plant capture

ಸ್ಥಾವರವನ್ನು ಸ್ಥಾಪಿಸಿದ 15 ಎಕರೆ ಮೈದಾನವು ಡಂಪಿಂಗ್ ವಲಯವಾಗಿತ್ತು. ಸ್ಥಾವರವನ್ನು ಪಿಪಿಪಿ ಮಾದರಿಯಲ್ಲಿ ತಯಾರಿಸಲಾಗಿದ್ದು, ಸ್ಥಾವರವನ್ನು ತಯಾರಿಸಿದ ಕಂಪನಿ ಇಂದೋರ್ ಮುನ್ಸಿಪಲ್ ಕಾಪೆರ್Çರೇಶನ್‍ಗೆ ಪ್ರತಿ ವರ್ಷಕ್ಕೆ 2.5 ಕೋಟಿ ರೂ.ಯನ್ನು 20 ವರ್ಷಗಳವರೆಗೆ ನೀಡಲಿದೆ.

Share This Article