ಅಬುಧಾಬಿ: ಅರಬ್ಬರ ನೆಲದಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಬುಧವಾರ) ಲೋಕಾರ್ಪಣೆಗೊಳಿಸಿದರು.
Advertisement
ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಬೋಚಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (Bochasanwasi Akshar Purushottam Swaminarayan Sanstha) ಹಿಂದೂ ದೇವಾಲಯವನ್ನು ಮೋದಿ ಇಂದು ಸಂಜೆ ಉದ್ಘಾಟಿಸಿದರು. ಇದನ್ನೂ ಓದಿ: ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ
Advertisement
Advertisement
ದೇವಾಲಯ ಉದ್ಘಾಟನೆಗೂ ಮುನ್ನ ಮಂದಿರದ ಹೊರಗಡೆ ಕಲ್ಯಾಣಿಗೆ ಗಂಗಾ ಪೂಜೆ ಕಾರ್ಯವನ್ನು ಮೋದಿ ನೆರವೇರಿಸಿದರು. ನಂತರ ಪ್ರವೇಶದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು.
Advertisement
ಇದೇ ವೇಳೆ ಪ್ರಧಾನಿ ಮೋದಿಗೆ ಈಶ್ವರಚರಣದಾಸ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಸಾಥ್ ನೀಡಿದರು. ಈ ವೇಳೆ ಸ್ವಾಮೀಜಿಗಳು ಭವ್ಯ ಮಂದಿರದ ರಚನೆ ಕುರಿತು ಮೋದಿ ಅವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಅಬುಧಾಬಿಯಲ್ಲಿ ಯಕ್ಷಗಾನ ವೇಷಧಾರಿಗಳಿಂದ ಮೋದಿಗೆ ಅದ್ಧೂರಿ ಸ್ವಾಗತ
ನಂತರ ದೇವಾಲಯದಲ್ಲಿ ಮೋದಿ ಆರತಿ ಬೆಳಗಿದರು. ಮಂದಿರದ ದೇವರಿಗೆ ಪುಷ್ಪವನ್ನು ಅರ್ಪಿಸಿ ಪ್ರಾರ್ಥಿಸಿದರು. 27 ಎಕರೆ ಜಾಗದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ.