ಬೆಂಗಳೂರು: ರಾಜ್ಯದ ಐದನೇಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(Global Investment Meet) ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಅರಮನೆ ಆವರಣದಲ್ಲಿ ಶುರುವಾಗಿದೆ. ಕೋವಿಡ್ ನಂತರ ನಡೆಯುತ್ತಿರುವ ಈ ಜಿಮ್ ಸಮಾವೇಶದಲ್ಲಿ ರಾಜ್ಯ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ದೇಶ ವಿದೇಶಗಳ ದೊಡ್ಡ ದೊಡ್ಡ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದು, ಜಗತ್ತಿನ ಗಮನ ಸೆಳೆದಿದೆ.
ಸಮಾವೇಶದಲ್ಲಿ ದೇಶ-ವಿದೇಶಗಳ ಅನೇಕ ಕೈಗಾರಿಕೋದ್ಯಮಿಗಳು, ಐಟಿಬಿಟಿ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಸ್ಟಾರ್ಟಪ್‌ಗಳ ಉದ್ಯಮಿಗಳು ಭಾಗವಹಿಸುವ ಮೂಲಕ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ.
Advertisement
Advertisement
Advertisement
ಇಂದು ಬೆಳಗ್ಗೆ 10:30ಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ವರ್ಚುವಲ್ ಮೂಲಕ ಮೊದಲ ದಿನದ ಸಮಾವೇಶದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ಉದ್ಘಾಟನಾ ಭಾಷಣದ ಮೂಲಕ ಕರ್ನಾಟಕದ ಹೂಡಿಕೆ ಸ್ನೇಹಿ ವಾತಾವರಣದ ಬಗ್ಗೆ ಉದ್ಯಮಿಗಳಿಗೆ ಪ್ರಧಾನಿ ಮೋದಿ ಮನವರಿಕೆ ಮಾಡಿಕೊಟ್ಟರು. ಕರ್ನಾಟಕ ದೇಶದ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಮತ್ತು ಸುರಕ್ಷಿತ ರಾಜ್ಯ ಎಂದು ಉದ್ಯಮಿಗಳಿಗೆ ಪ್ರಧಾನಿ ಮೋದಿ ಸಂದೇಶ ರವಾನಿಸಿದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ
Advertisement
Hon'ble PM @narendramodi addressed #InvestKarnataka2022, a Global Investment Meet, and urged investors to leverage the rich potential offered by #NewIndia across sectors!#InvestIndia #InvestInKarnataka #BuildForTheWorld @DPIITGoI @DoC_GoI @PiyushGoyal @CMofKarnataka @BSBommai pic.twitter.com/TFWqUHMyrI
— Invest India (@investindia) November 2, 2022
ಈ ಜಿಮ್ ಸಮಾವೇಶದಲ್ಲಿ 7 ಲಕ್ಷ ಕೋಟಿ ರು.ಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ. ಜೊತೆಗೆ 5 ಲಕ್ಷ ಜನರಿಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಮಾಡಲಾಗಿದೆ. ಜಿಮ್ ಸಮಾವೇಶದಲ್ಲಿ ಮೊದಲ ದಿನವೇ ಭರಪೂರ ಬಂಡವಾಳ ಹೂಡಿಕೆ ಹರಿದು ಬಂದಿದೆ. ಮೊದಲ ದಿನ 4.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತದ ಒಡಂಬಡಿಕೆಗಳಿಗೆ ಸಹಿ ಹಾಕಲಾಯ್ತು. ಮೂಲಸೌಕರ್ಯ, ಲಾಜಿಸ್ಟಿಕ್, ಗ್ರೀನ್ ಹೈಡ್ರೋಜನ್, ಗ್ರೀನ್ ಅಮೋನಿಯ, ಸೋಲಾರ್ ಇಂಧನ ಕ್ಷೇತ್ರ, ಸೆಮಿ ಕಂಡಕ್ಟರ್ ವಲಯ, ಎಲೆಕ್ಟ್ರಾನಿಕ್ಸ್, ಉತ್ಪಾದನಾ ವಲಯ ಸೇರಿ ಹಲವು ಕಂಪೆನಿಗಳ ಕೈಗಾರಿಕೋದ್ಯಮಿಗಳು ಮೊದಲ ದಿನ ಹೂಡಿಕೆಗೆ ರಾಜ್ಯ ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡವು. ಸಮಾವೇಶದಲ್ಲಿ ಸೋಲಾರ್, ಗ್ರೀನ್ ಹೈಡ್ರೋಜನ್ ಸೇರಿ ಹಸಿರು ಇಂಧನ ಕ್ಷೇತ್ರದಲ್ಲೇ ಸುಮಾರು 2 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಜಿಂದಾಲ್ ಸಂಸ್ಥೆಯೇ 40 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಸಲ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿ ಈಗಾಗಲೇ ಅನುಮೋದಿಸಿರುವ 1.73 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು, ದಾವೋಸ್‌ನಲ್ಲಿ ಸಿಎಂ ಸಮ್ಮುಖದಲ್ಲಿ ಸಹಿ ಹಾಕಿರುವ 58,000 ಕೋಟಿ ರೂ. ಒಪ್ಪಂದಗಳೂ ಸಮಾವೇಶದ ಭಾಗವಾಗಿರಲಿವೆ.
"2025ರಲ್ಲಿ ಮುಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಏರ್ಪಡಿಸಲಾಗುವುದು. ಆ ವೇಳೆ ನಮ್ಮ ಕರ್ನಾಟಕ ರಾಜ್ಯ 1 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಅದಮ್ಯ ವಿಶ್ವಾಸ ನಮ್ಮಲ್ಲಿದೆ." ಮುಖ್ಯಮಂತ್ರಿ : @BSBommai #InvestKarnataka2022 #GIM2022 pic.twitter.com/WoYpcRqefA
— CM of Karnataka (@CMofKarnataka) November 2, 2022
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯೆಲ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಸಚಿವರಾದ ಅಶ್ವಥ್ ನಾರಾಯಣ, ಎಂಟಿಬಿ ನಾಗರಾಜ್ ಭಾಗವಹಿಸಿದ್ದರು.
ಜಾಗತಿಕ ಹೂಡಿಕೆದಾರ ಸಮಾವೇಶ-2022.#InvestKarnataka2022 #GIM2022@narendramodi @BSBommai https://t.co/nBSvn28uHG
— CM of Karnataka (@CMofKarnataka) November 2, 2022
ಉದ್ಯಮಿಗಳಾದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಳಂ ಬಿರ್ಲಾ, ಕಿರ್ಲೋಸ್ಕರ್ ಮೋಟಾರ್ಸ್‌ನ ವಿಕ್ರಮ ಕಿರ್ಲೋಸ್ಕರ್, ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ, ಅದಾನಿ ಪೋರ್ಟ್ಸ್ ಸಿಇಒ ಕರಣ್ ಅದಾನಿ, ಜೆಎಸ್‌ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್, ಭಾರತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ರಾಜನ್ ಮಿತ್ತಲ್, ಸ್ಟೆರಲೈಟ್ ಪವರ್‌ನ ಸಿಇಒ ಮತ್ತು ಎಂಡಿ ಪ್ರತೀಕ್ ಅಗರವಾಲ್ ಮತ್ತು ಸ್ಟಾರ್‌ಬಕ್ಸ್ ಸಹಸಂಸ್ಥಾಪಕ ಜೆವ್ ಸಿಗೆಲ್ ಭಾಗವಹಿಸಿದ್ದರು.