ಭೋಪಾಲ್: ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ರಾಣಿ ಕಮಲಾಪತಿ ಭೋಪಾಲ್- ದೆಹಲಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಭಾರತೀಯ ರೈಲ್ವೆ ಜಾಲದಲ್ಲಿ 11ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ( Vande Bharat Express) ಇದಾಗಿದ್ದು, 160 ಕಿ.ಮೀ ವೇಗದಲ್ಲಿ ಚಲಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದೆ.
ಈಗಾಗಲೇ ಗತಿಮಾನ್ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ 160 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಹಿನ್ನೆಲೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 160 ಕಿ.ಮೀ ವೇಗದಲ್ಲಿ ಸಂಚರಿಸಲು ನಿರ್ಧರಿಸಿದೆ. ಈ ಮುಂಚೆ ಚಾಲನೆ ನೀಡಿದ ಎಲ್ಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 130 ಕಿ.ಮೀ ವೇಗದಲ್ಲಿ ಸಂಚರಿಸುತ್ತಿವೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ
Advertisement
Advertisement
ದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದ ನಡುವೆ ವಾರದ 6 ದಿನ ಸಂಚರಿಸಲಿದ್ದು, ಪ್ರತಿ ಶನಿವಾರದಂದು ರೈಲು ಸಂಚರಿಸುವುದಿಲ್ಲ. ಭೋಪಾಲ್‌ನಿಂದ ಬೆಳಗ್ಗೆ 5:40 ಕ್ಕೆ ಹೊರಟು ಮಧ್ಯಾಹ್ನ 1:10ಕ್ಕೆ ದೆಹಲಿ ತಲುಪಿಲಿದ್ದು, ದೆಹಲಿಯಿಂದ 2:40ಕ್ಕೆ ಹೊರಟು ರಾತ್ರಿ 10:10ಕ್ಕೆ ಭೋಪಾಲ್ ತಲುಪಲಿದೆ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ