ನವದೆಹಲಿ: ನವರಾತ್ರಿ ಮತ್ತು ಭಾರತೀಯ ಸಾಂಪ್ರದಾಯಿಕ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಸಮಸ್ತ ನಾಡಿನ ಜನತೆಗೆ ನವರಾತ್ರಿಯ ಶುಭಾಶಯಗಳು. ಈ ಶಕ್ತಿಯ ಆರಾಧನೆಯ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್
सभी देशवासियों को नवरात्रि की बधाई।
शक्ति की उपासना का यह पर्व हर किसी के जीवन में नई ऊर्जा का संचार करे।
— Narendra Modi (@narendramodi) April 2, 2022
ಚೈತ್ರ ನವರಾತ್ರಿಯ ಮಂಗಳಕರ 9 ದಿನಗಳ ಹಬ್ಬವು ಇಂದಿನಿಂದ ಪ್ರಾರಂಭವಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ದುರ್ಗಾ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ
आप सभी को नव संवत्सर की शुभकामनाएं। विक्रम संवत 2079 सबके जीवन में नया उत्साह और नई उमंग लेकर आए।
— Narendra Modi (@narendramodi) April 2, 2022
ಮತ್ತೊಂದೆಡೆ ಇಂದು ಭಾರತೀಯ ಸಾಂಪ್ರದಾಯಿಕ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬವಾಗಿದ್ದು, ಈ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವಾಗಿ ಕೂಡ ಮೋದಿ ಅವರು, ವಿಕ್ರಮ್ ಸಂವತ್ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸ್ಪೂರ್ತಿಯನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ
Best wishes on the special occasion of Ugadi. pic.twitter.com/1aAeMDARsg
— Narendra Modi (@narendramodi) April 2, 2022
ಯುಗಾದಿ ಹಬ್ಬದ ಪ್ರಯುಕ್ತ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿರುವ ಕೆಲವು ಗ್ರೀಟಿಂಗ್ ಕಾರ್ಡ್‍ಗಳನ್ನು ಮೋದಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡು ಜನರಿಗೆ ಶುಭಾಶಯ ತಿಳಿಸಿದ್ದು, ಬಹಳ ವಿಶೇಷವಾಗಿದೆ.