ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಪ್ರತಿ 15 ದಿನಕ್ಕೆ ಯೋಜನೆಯನ್ನ ತಂದಿದೆ. ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶಂಸಿದರು.
ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಪ್ರಕೋಷ್ಠ ಸಮಾವೇಶದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇರೋರಿಗೆ ಆ್ಯಂಬಿಷನ್ ಇರಬೇಕು. ಮಂತ್ರ ಹಾಕಿದ್ರೆ ಮಾವಿನಹಣ್ಣು ಉದುರೋದಿಲ್ಲ. ಹೀಗಾಗಿ ಮೋದಿ ಸರ್ಕಾರದ ಯೋಜನೆಗಳನ್ನು ಜನರಿಗೆ ನೀವು ತಲುಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ
Advertisement
Advertisement
ಮೊದಲು ನೀವು ಯೋಜನೆಯ ಬಗ್ಗೆ ತಿಳಿದುಕೊಳ್ಳಿ. ಮೋದಿ ಸರ್ಕಾರದ ಯೋಜನೆ ಹೇಳಿ ಅಂದ್ರೆ ನಿಮಗೆ ಗೊತ್ತಿಲ್ಲ. ಮೊದಲು ನೀವು ತಿಳಿದುಕೊಳ್ಳಿ ಅಂತ ಬಿಜೆಪಿ ಸ್ಥಳೀಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
Advertisement
Advertisement
ಜನರಿಗಾಗಿ ಉಜ್ವಲ ಯೋಜನೆಯನ್ನ ನೀಡಿದ್ದೀವಿ. ಅಂತರಾಷ್ಟ್ರೀಯ ಕಾರಣದಿಂದ ಗ್ಯಾಸ್ ಬೆಲೆ ಏರಿಕೆಯಾಗಿದೆ. ಆದ್ರೂ 200ರೂ. ಸಬ್ಸಿಡಿ ನೀಡಿದ್ದೇವೆ. ಮೋದಿ ಅವರು ಹಗಲು, ರಾತ್ರಿ ಕಷ್ಟಪಟ್ಟಿದ್ದಾರೆ. ನಾವೇನು ಮಾಡ್ತಿದ್ದಿವಿ? 2024ರಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಭಾರತ ಆಗಬೇಕು ಎಂದರು. ಇದನ್ನೂ ಓದಿ: ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ