ನವದೆಹಲಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೋದಿ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಇದಾಗಿದ್ದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇಂದಿನಿಂದ ಫೆಬ್ರವರಿ 13ರತನಕ ಬಜೆಟ್ ಅಧಿವೇಶನ ನಡೆಯಲಿದ್ದು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅನಾರೋಗ್ಯದಿಂದ ಬಳಲ್ತಿರುವ ಜೇಟ್ಲಿ ಅನುಪಸ್ಥಿತಿಯಲ್ಲಿ ಸಚಿವ ಪಿಯೋಷ್ ಗೊಯಲ್ ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
Advertisement
Advertisement
ಮಧ್ಯಂತರ ಬಜೆಟ್ ಕೂಡ ಪೂರ್ಣ ಬಜೆಟ್‍ನಂತೆಯೇ ಇರಲಿದ್ದು, ನಿರ್ದಿಷ್ಟ ವರ್ಷದ ಆರ್ಥಿಕ ವರದಿಯ ಮೇಲ್ನೋಟ ನೀಡುತ್ತದೆ. ಚುನಾವಣೆಯ ಹಿನ್ನೆಲೆ ಮಧ್ಯಂತರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಹಾಕಿದ್ದು ರೈತಾಪಿ ಹಾಗೂ ಜನ ಸಾಮಾನ್ಯರಿಗೆ ಮೋದಿ ಬಂಪರ್ ಆಫರ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
Advertisement
Delhi: Visuals of the all-party meeting ahead of #BudgetSession which begins tomorrow. The meeting is currently underway. pic.twitter.com/BZTCOGh3P5
— ANI (@ANI) January 30, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv