ನವದೆಹಲಿ: ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಬುಧವಾರದಂದು ಭಾರತಕ್ಕೆ ವಾಪಸ್ಸಾಗಿದ್ದಾರೆ.
ಮೋದಿ ಭಾರತಕ್ಕೆ ಮರಳುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿ ತಂದಿದ್ದಾರೆ. ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಮೋದಿಗೆ ಈ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಸೈಕಲ್‍ನೊಂದಿಗೆ ತೆಗೆಸಿಕೊಂಡಿರೋ ಫೋಟೋವನ್ನ ಮೋದಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಮಾರ್ಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
ತಿಳಿ ನೀಲಿ ಬಣ್ಣದ ಈ ಬಟಾವಸ್ ಸೈಕಲ್‍ನಲ್ಲಿ ಮುಂಭಾಗದಲ್ಲಿರುವ ಎಲ್‍ಇಡಿ ದೀಪವಿದ್ದು, ಇದನ್ನು ಬೆಳಗಿಸಲು ನೆರವಾಗುವಂತೆ ಡೈನಮೋ ಅಳವಡಿಸಲಾಗಿದೆ.
Advertisement
ನೆದರ್ಲ್ಯಾಂಡ್ಸ್ ನಲ್ಲಿ ಹೆಚ್ಚಾಗಿ ಜನ ಸಾರಿಗೆಗೆ ಸೈಕಲ್ ಬಳಸುತ್ತಾರೆ. ಅಂಕಿ ಅಂಶದ ಪ್ರಕಾರ ಶೇ. 36ರಷ್ಟು ಜನ ಸೈಕಲ್ ಬಳಸಲು ಇಷ್ಟಪಡುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ಸ್ವತಃ ಅಲ್ಲಿನ ಪ್ರಧಾನಿ ಮಾರ್ಕ್ ಕೂಡ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಾರೆಂದು ವರದಿಯಾಗಿದೆ.
Advertisement
ಮೋದಿ ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿ ಇಂದು ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ವೈಟ್‍ಹೌಸ್‍ಗೆ ಭೇಟಿ ನೀಡಿದ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಾಗಿ ಸುಂದರ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ರು. ಹಾಗೆ ಮೆಲಾನಿಯಾ ಟ್ರಂಪ್‍ಗಾಗಿ ಕಾಶ್ಮೀರಿ ಶಾಲ್, ಹಿಮಾಚಲ ಪ್ರದೇಶದ ಬೆಳ್ಳಿ ಬ್ರೇಸ್‍ಲೆಟ್, ಟೀ ಹಾಗೂ ಜೇನುತುಪ್ಪವನ್ನ ಉಡುಗೊರೆಯಗಿ ನೀಡಿದ್ದಾರೆ.
Advertisement
Thank you @MinPres @markrutte for the bicycle. pic.twitter.com/tTVPfGNC9k
— Narendra Modi (@narendramodi) June 28, 2017
UItgebreide gesprekken gehad met @MinPres @markrutte over de relaties tussen India en Nederland. pic.twitter.com/GGe7ucgDb0
— Narendra Modi (@narendramodi) June 27, 2017
Sterke banden tussen onze landen zijn goed voor de wereld. @MinPres @markrutte pic.twitter.com/LJpC2KxAYK
— Narendra Modi (@narendramodi) June 27, 2017
Held extensive talks with @MinPres @markrutte on India-Netherlands relations. Strong ties between our nations are beneficial for the world. pic.twitter.com/y4HTy4eQ42
— Narendra Modi (@narendramodi) June 27, 2017
Sharing my remarks on the importance of India-Netherlands ties and talks with @MinPres @markrutte. https://t.co/mS5YXrp2Zp pic.twitter.com/TcksxbvLyq
— Narendra Modi (@narendramodi) June 27, 2017
Interacted with Dutch CEOs. Invited them to invest in India and spoke about reform initiatives of Government of India over the last 3 years. pic.twitter.com/AzVXfQOsmh
— Narendra Modi (@narendramodi) June 27, 2017
Unforgettable community reception at The Hague. It was a delight to be among the diaspora. Sharing my speech. https://t.co/dTLiFjRGRp pic.twitter.com/M0YF3UI1JA
— Narendra Modi (@narendramodi) June 27, 2017