ನವದೆಹಲಿ: ಬುಧವಾರ ಪಿಎಂ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂ ಜೊತೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ಎರಡು ವಾರದಿಂದ ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮೋದಿ ಅವರು ತುರ್ತು ಮೀಟಿಂಗ್ ಕರೆದಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ಭಾಗಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಪಿಎಂ ಮನೆ ಮುಂದೆ ಎಲ್ಲ ಧರ್ಮದ ಸಾಲುಗಳನ್ನು ಪಠಿಸಲು ಅವಕಾಶ ಕೊಡಿ: NCP ನಾಯಕಿ
Advertisement
Advertisement
ಬೆಂಗಳೂರು ಕೂಡ ಕೊರೊನಾ ಹೆಚ್ಚಳದ ಹಿಟ್ ಲಿಸ್ಟ್‌ನಲ್ಲಿದೆ. ಬೆಂಗಳೂರು ನಿಧಾನಕ್ಕೆ ಕೊರೊನಾ ಹಾಟ್ ಸ್ಪಾಟ್ ಆಗುತ್ತಿರುವ ಆತಂಕ ಶುರುವಾಗಿದೆ. ಈ ಸಭೆಯಲ್ಲಿ ಮೋದಿ ಅವರು ಎಲ್ಲ ರಾಜ್ಯದಿಂದಲೂ ಕೊರೊನಾ ಪಾಸಿಟಿವಿಟಿ ದರದ ರಿಫೋರ್ಟ್ ಕಾರ್ಡ್ ಪಡೆಯಲಿದ್ದಾರೆ.
Advertisement
Advertisement
ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ಮಾಸ್ಕ್ ಧರಿಸುವುದನ್ನು ಕೈ ಬಿಟ್ಟಿದ್ದಾರೆ. ಮುಂದೆ ಈದ್, ಅಕ್ಷಯ ತೃತೀಯ ಹಬ್ಬಗಳು ಬರಲಿದೆ. ಹೀಗಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಪ್ರಧಾನಿ ಸೂಚನೆ ನೀಡುವ ಸಾಧ್ಯತೆಯಿದೆ.
ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಬಹುದು. ಟೆಸ್ಟಿಂಗ್ ಹೆಚ್ಚಳ ಮತ್ತು ಮಕ್ಕಳಿಗೆ ಲಸಿಕೆ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು