ನವದೆಹಲಿ: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕ್ ಕಸ್ಟಡಿಯಲ್ಲಿರುವ ಕಮಾಂಡರ್ ಅಭಿನಂದನ್ ಬಿಡುಗಡೆಯಾಗುತ್ತಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಯಾವುದೇ ಪ್ರಾಜೆಕ್ಟ್ ತಯಾರಿಸುವ ಮೊದಲು ಪೈಲಟ್ ಪ್ರಾಜೆಕ್ಟ್ ಮಾಡಲಾಗುತ್ತದೆ. ಆ ಪೈಲೆಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ ಂದು ಹೇಳಿದರು.
Advertisement
#WATCH PM Narendra Modi during Shanti Swarup Bhatnagar Prize for Science and Technology ceremony at Vigyan Bhavan in Delhi. 'Pilot project hone ke baad scalable kiya jata hai, to abhi abhi ek pilot project ho gaya, abhi real karna hai, pehle to practice thi.' pic.twitter.com/SiftXrg4dE
— ANI (@ANI) February 28, 2019
Advertisement
ಮೋದಿ ಈ ಮಾತನ್ನು ಹೇಳುತ್ತಿದ್ದಂತೆ ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿದರು. ನಂತರ ಮಾತು ಮುಂದುರಿಸಿದ ಮೋದಿ ಪೈಲಟ್ ಪ್ರಾಜೆಕ್ಟ್ ಈಗ ಪೂರ್ಣಗೊಂಡಿದ್ದು ರಿಯಲ್ ಬಾಕಿ ಇದೆ. ರಿಯಲ್ ಪ್ರಾಜೆಕ್ಟ್ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
Advertisement
ಮೋದಿ ಅವರು ವೇದಿಕೆ ಬರುತ್ತಿದಂತೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದ ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮೋದಿ, ವಿಜ್ಞಾನ ದಿವಸ ಎಂದ ಕೂಡಲೇ ನಮಗೇ ರಾಮನ್ ಅವರ ಸಿದ್ಧಾಂತ ನೆನಪಾಗುತ್ತದೆ. ವಿಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನಿಮ್ಮ ಪ್ರಯತ್ನ, ಕಾರ್ಯಗಳು ದೇಶಕ್ಕೆ ಲಾಭ ನೀಡಿದೆ ಎಂದರು.
Advertisement
Honouring the winners of the Shanti Swarup Bhatnagar Prizes. https://t.co/uNp48mbhAt
— PMO India (@PMOIndia) February 28, 2019
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದ ಪ್ರಧಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ವಿಜ್ಞಾನವನ್ನು ಸಮಾಜದೊಂದಿಗೆ ಜೋಡಣೆ ಮಾಡಿ ಜನರ ಅಗತ್ಯಗಳನ್ನು ಪೂರೈಕೆ ಮಾಡಬೇಕು. ವಿಶ್ವಮಟ್ಟದಲ್ಲಿ ನಮ್ಮ ವಿಜ್ಞಾನದ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ನಮ್ಮ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ಅಂತರಿಕ್ಷ ಮಾನವನನ್ನು ಕಳಹಿಸುವ ನಮ್ಮ ನಮ್ಮ ಗುರಿ ತಲುಪಬೇಕಿದೆ ಎಂದು ಕರೆ ನೀಡಿದರು.
ದೇಶ ವಿಜ್ಞಾನವನ್ನು ಮತ್ತಷ್ಟು ಸಫಲವಾಗುವಂತೆ ಮಾಡಲು ದೇಶದ ಐಐಎಸ್‍ಸಿಗಳಿಗೆ ಸ್ವಯತ್ತಾತೆಯನ್ನು ನೀಡುವ ಚಿಂತನೆ ಇದೆ. ಈ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇಶದ ಪ್ರತಿಯೊಬ್ಬ ಜೀವನದ ಬದಲಾವಣೆಗೆ ವಿಜ್ಞಾನ, ತಂತ್ರಜ್ಞಾನದ ಕೊಡುಗೆ ಬೇಕಾಗಿದೆ. ವಿವಿಧ ಯೋಚನೆಗಳ ಮೂಲಕ ಪ್ರತಿಯೊಬ್ಬ ಕೊಡುಗೆ ಭಿನ್ನವಾಗಿರುತ್ತದೆ. ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುತ್ತಾ ನಮ್ಮ ಸಂಶೋಧನೆಗಳು ಸಾಗಬೇಕಿದೆ. ಕೃಷಿ, ಸ್ವಚ್ಛತೆ, ತಂತ್ರಜ್ಞಾನ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮತ್ತಷ್ಟು ಸಂಶೋಧನೆಗಳು ಆಗಬೇಕಿದ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv