ಕಲಬುರಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‍ಕೆ ಅಡ್ವಾಣಿ ಅವರು ಎದುರಿಗೆ ಬಂದರು ನಮಸ್ಕಾರ ಮಾಡಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆರ್‍ಎಸ್‍ಎಸ್, ಸಂಘ ಪರಿವಾರ ಜೊತೆ ಒಡನಾಟವಿದ್ದರು ಸಹ ಸಹಿಷ್ಣುತೆಯಿಂದ ಬದುಕಿದ್ದಾರೆ. ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಅಟಲ್ ಬದುಕಿದ್ದಾಗ ಪ್ರಧಾನಿ ಮೋದಿ ಎಷ್ಟು ಸಲ ಭೇಟಿಯಾಗಿದ್ದಾರೆ? ಬಿಜೆಪಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ ಎದುರಿಗೆ ಬಂದರು ಸಹ ಪ್ರಧಾನಿ ಮೋದಿ ನಮಸ್ಕರಿಸಲ್ಲ. ಮೋದಿ ಅವರನ್ನು ಉಳಿಸಿ ಬೆಳೆಸಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ ಮೋದಿಗೆ ಯಾರ ಬಗ್ಗೆ ಗೌರವವಿದೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಇದೇ ವೇಳೆ ಯುಎಇ ಯಿಂದ ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ನಾವು ಸಹ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ಅದು ಅಂದಿನ ಸರ್ಕಾರದ ನಿಲುವಾಗಿತ್ತು. ಆದರೆ ಈಗಾಗಾಗಲೇ ನಿಧಿಯನ್ನು ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ಕೇರಳ ಸಿಎಂ ಹೇಳಿದ್ದಾರೆ. ಅಲ್ಲದೇ ಕೇರಳ ಸಿಎಂ ಕೇಂದ್ರ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅನುದಾನಕ್ಕೆ ಮನವಿ ಮಾಡಿದ್ದಾರೆ. ಇಷ್ಟು ಹಣ ಕೇಂದ್ರವೇ ನೀಡಿದರೆ, ಬೇರೆ ಕಡೆಯಿಂದ ಪಡೆಯುವ ಪ್ರಶ್ನೆ ಬರಲ್ಲ. ಕೇರಳದ ಹಾಗೇ ಕೊಡಗಿಗೆ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಹೇಳಿದರು.
Advertisement
ವಿಮಾನ ಹಾರಾಟ: ಆಗಸ್ಟ್ 26 ರಂದು ಕಲಬುರಗಿ ವಿಮಾನನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಮಾಡಲಾಗುವುದು ಎಂದು ತಿಳಿಸಿದ ಅವರು, ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯಿರುವ ವಿಮಾನ ನಿಲ್ದಾಣದ ಪ್ರಯೋಗಿಕ ಸಂಚಾರಕ್ಕಾಗಿ ಎಲ್ಲಾ ಹಂತದ ಸಿದ್ಧತೆಗಳು ಮುಗಿದಿದೆ. ಪ್ರಯೋಗಿಕ ಸಂಚಾರ ಮಾಡಲು ಭಾರತದ ವಿಮಾನ ಪ್ರಾಧಿಕಾರ ಅನುಮತಿ ನೀಡಬೇಕು ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
The flood situation in Kerala has been continuously and closely monitored by the Centre. All help is being provided to the State Government to deal with the adverse situation. PM has been in constant touch with the Kerala CM regarding the flood situation.
— PMO India (@PMOIndia) August 18, 2018
CM Pinarayi Vijayan informed that the United Arab Emirates will provide Kerala an assistance of ₹700 Crore. Kerala has a special relationship with UAE, which is a home away from home for Malayalees. We express our gratitude to UAE for their support. #KeralaFloodRelief pic.twitter.com/yfwbt9iEkd
— CMO Kerala (@CMOKerala) August 21, 2018
We're sending 25 trucks consisting of 7 MT of relief material including eatables & water. It'll be taken to Trivandrum via Airforce planes. I thank all who have contributed in providing relief material & we'll keep sending more to Kerala: UP CM Yogi Adityanath in Lucknow pic.twitter.com/uUwhhoHQKv
— ANI UP/Uttarakhand (@ANINewsUP) August 22, 2018