ನಟ ಕಿಚ್ಚ ಸುದೀಪ್ (Kichcha Sudeep) ತಾಯಿ ಸರೋಜಾ (Saroja) ಅವರು ಅ.20ರಂದು ಇಹಲೋಕ ತ್ಯಜಿಸಿದರು. ಸುದೀಪ್ ತಾಯಿಯ ನಿಧನಕ್ಕೆ ಚಿತ್ರರಂಗದ ನಟ, ನಟಿಯರು ಆಪ್ತರು ಸಂತಾಪ ಸೂಚಿಸಿದ್ದರು. ಇದೀಗ ಪಿಎಂ ನರೇಂದ್ರ ಮೋದಿ (Narendra Modi) ಅವರು ಸುದೀಪ್ ತಾಯಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದು, ಅವರ ಪತ್ರಕ್ಕೆ ಎಕ್ಸ್ ಖಾತೆಯಲ್ಲಿ ನಟ ಪ್ರತಿಕ್ರಿಯೆ ನೀಡಿದ್ದಾರೆ. ಪಿಎಂ ಮೋದಿ ಪತ್ರಕ್ಕೆ ನನ್ನ ಹೃದಯ ತಟ್ಟಿದೆ ಎಂದಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ‘ಸೀತಾರಾಮಂ’ ನಟಿ- ಸೂರ್ಯಗೆ ಮೃಣಾಲ್ ನಾಯಕಿ?
Advertisement
ಸುದೀಪ್‌ಗೆ ಅ.23ರಂದು ಪ್ರಧಾನಿ ಕಚೇರಿಯಿಂದ ಸಂತಾಪ ಪತ್ರವನ್ನು ಕಳುಹಿಸಿ ಕೊಡಲಾಗಿದೆ. ಇದೇ ಪತ್ರವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ಪ್ರಧಾನಿ ನರೇಂದ್ರ ಮೋದಿ ಜೀ ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ ಅಂತ ಬರೆದುಕೊಂಡಿದ್ದಾರೆ.
Advertisement
Honarable @PMOIndia @narendramodi ji,
I am writing to sincerely thank you for this compassionate condolence letter. Your thoughtful words provide a source of comfort during this profoundly difficult time.
Your empathy has touched my heart deeply, and I am truly grateful for your… pic.twitter.com/u4aeRF8Sw3
— Kichcha Sudeepa (@KicchaSudeep) October 28, 2024
Advertisement
ನರೇಂದ್ರ ಮೋದಿ ಕಳುಹಿಸಿದ ಪತ್ರದಲ್ಲಿ ಏನಿತ್ತು?
Advertisement
ಶ್ರೀ ಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಳವಾದ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ.
ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ಭಾವನಾತ್ಮಕ ವೇದನೆ ಅವಳೊಂದಿಗೆ ಮುರಿಯಲಾಗದ ಬಂಧವನ್ನು ಪ್ರತಿಬಿಂಬಿಸುತ್ತದೆ. ಇದೇ ವೇಳೆ, ನಿಮ್ಮ ಮತ್ತು ಕುಟುಂಬದ ಮೇಲೆ ಆಕೆ ಬೀರಿದ ಪ್ರಭಾವವನ್ನು ಒತ್ತಿ ಹೇಳುತ್ತದೆ. ಅವಳು ನಿಮ್ಮ ನೆನಪುಗಳಲ್ಲಿ ಬದುಕುವುದನ್ನು ಮುಂದುವರಿಸುತ್ತಾರೆ ಮತ್ತು ಅವರಿಂದ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂದು ನನಗೆ ನಂಬಿಕೆ ಇದೆ. ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಯಾವುದು ಎಂದು ನಾನು ಬಲ್ಲೆ. ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇದೆ. ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯ ಪಾಲಿಸಲಿ ಓಂ ಶಾಂತಿ ಎಂದು ಪತ್ರದಲ್ಲಿ ಪ್ರಧಾನಿ ಮೋದಿ ಬರೆದಿದ್ದಾರೆ.