ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಗಣೇಶನಿಗೆ ಮೋದಿ ಆರತಿ – ಸಂಜಯ್‌ ರಾವತ್‌ ಆಕ್ಷೇಪ

Public TV
2 Min Read
PM Narendra Modi CJI Chandrachud 2

ಮುಂಬೈ: ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ (CJI Chandrachud) ನಿವಾಸಕ್ಕೆ ಪ್ರಧಾನಿ ಮೋದಿ (PM Narendra Modi) ತೆರಳಿದ್ದಕ್ಕೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವತ್‌ (Sanjay Raut) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವ ಸಮಯದಲ್ಲಿ ಸಿಜೆಐ ನಿವಾಸಕ್ಕೆ ಆಗಮಿಸಿದ ಮೋದಿ ಗಣಪತಿಗೆ ಆರತಿ ಎತ್ತಿದ್ದರು. ಈ ವಿಚಾರವನ್ನು ರಾವತ್‌ ಪ್ರಸ್ತಾಪ ಮಾಡಿ ಹಲವು ಪ್ರಶ್ನೆ ಎತ್ತಿದ್ದಾರೆ.

ಗಣಪತಿ ಹಬ್ಬ (Ganesh Festival) ನಡೆಯುತ್ತಿದೆ, ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪ್ರಧಾನಿ ಇದುವರೆಗೆ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಪ್ರಧಾನಮಂತ್ರಿಯವರು ಸಿಜೆಐ ಮನೆಗೆ ತೆರಳಿ ಆರತಿ ಬೆಳಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಪದ ಬಳಸಿ ಅನ್ಯಕೋಮಿನವರಿಗೆ ಬೆಂಬಲ – ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದ ಯತ್ನಾಳ್

ಸಂವಿಧಾನದ ಪಾಲಕರು ರಾಜಕಾರಣಿಗಳನ್ನು ಭೇಟಿ ಮಾಡಿದರೆ, ಅದು ಜನರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಿಂದ ದೂರವಿರಬೇಕು. ಯಾಕೆಂದರೆ ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಕಾಣುತ್ತಿದೆ. ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಂಜಯ್‌ ರಾವತ್‌ ಕೇಳಿದ್ದಾರೆ.

PM Narendra Modi CJI Chandrachud 1

ನಮ್ಮ ಪ್ರಕರಣವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಸರ್ಕಾರದಿಂದ ಶಿವಸೇನೆ ಮತ್ತು ಎನ್‌ಸಿಪಿ ತತ್ತರಿಸುತ್ತಿವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದ ಅಕ್ರಮ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಹೆಚ್ಚಿನ ಒಲವು ಹೊಂದಿದ್ದಾರೆ. ಪ್ರಧಾನಮಂತ್ರಿ ಮತ್ತು ಸಿಜೆಐ ನಡುವಿನ ನಂಟಿನಿಂದ ಮಹಾರಾಷ್ಟ್ರದ ಜನರ ಮನಸ್ಸಿನಲ್ಲಿ ಒಂದು ಸಂದೇಹ ವ್ಯಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Share This Article