– ಗೂಗಲ್‌ನಲ್ಲಿ 50 ಸಾವಿರ ಲಕ್ಷದ್ವೀಪ ಸರ್ಚ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಲಕ್ಷದ್ವೀಪಕ್ಕೆ (Lakshadweep) ತೆರಳಿ ಚೀನಾದ ಆಪ್ತ ರಾಷ್ಟ್ರ ಮಾಲ್ಡಿವ್ಸ್‌ಗೆ (Maldives) ಶಾಕ್ ನೀಡಿದ್ದಾರೆ.
Advertisement
ಲಕ್ಷದ್ವೀಪಕ್ಕೆ ತೆರಳಿದ್ದ ಮೋದಿ ಸ್ನಾರ್ಕಲಿಂಗ್ ಮಾಡಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯರು ಗೂಗಲ್‌ನಲ್ಲಿ (Google) ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡುವುದು ಭಾರೀ ಏರಿಕೆಯಾಗಿದೆ.
Advertisement
Advertisement
ಫೋಟೋ ಹಾಕುವುದರ ಜೊತೆ ಇಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಮೋದಿ ಸೂಚಿಸಿದ್ದಾರೆ.
Advertisement
ಭಾರತದಲ್ಲಿ ಬುಧವಾರ ಅತಿಹೆಚ್ಚು ಗೂಗಲ್ ಸರ್ಚ್ ಆದ 9ನೇ ಪದ ಲಕ್ಷ ದ್ವೀಪವಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಇದರ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಾಡಿದ್ದಾರೆ. ಒಂದು ವೇಳೆ ಭಾರೀ ಸಂಖ್ಯೆಯಲ್ಲಿ ಲಕ್ಷದ್ವೀಪಕ್ಕೆ ಭಾರತೀಯರು ಭೇಟಿ ನೀಡಿದರೆ ಮಾಲ್ಡೀವ್ಸ್ ಆರ್ಥಿಕತೆಗೆ ಬಿಗ್ ಶಾಕ್ ನೀಡಬಹುದು ಎಂದೇ ವಿಶ್ಲೇಷಿಸಲಾಗುತ್ತದೆ. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ- ಹೊಗಳಿದ ಚೀನಾ
ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.
2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ಗೆ ಪಾಠ ಕಲಿಸಲು ಮೋದಿ ಅವರು ಲಕ್ಷದ್ವೀಪಕ್ಕೆ ತೆರಳುವಂತೆ ಕರೆ ನೀಡಿದ್ದಾರೆ. ಈ ಮೂಲಕ ಭಾರತದ ಪ್ರವಾಸಿಗರು ವಿದೇಶದಲ್ಲಿ ಮಾಡುವ ಖರ್ಚನ್ನು ಭಾರತದತ್ತ ತಿರುಗಿಸಿ ದೇಶದ ಪ್ರವಾಸೋದ್ಯಮ ಬೆಳೆಸಲು ಪ್ರೋತ್ಸಾಹ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.
ಬಿಳಿ ಮರಳು, ಸ್ವಚ್ಛಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.