ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಮೂಡಿಸಿರುವ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನದ ಬೆಳಕು ದೇಶಾದ್ಯಂತ ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲೂ ಪ್ರಕಾಶಿಸಿದೆ.
ಪಾಕಿಸ್ತಾನದಲ್ಲಿರುವ ಭಾರತದ ರಾಯಬಾರ ಕಚೇರಿಯ ಸದಸ್ಯರು ದೀಪಗಳನ್ನು ಬೆಳಗಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟವನ್ನು ಗುರುತಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 9 ಗಂಟೆಗೆ ಎಲ್ಲಾ ಮನೆಗಳ ದೀಪಗಳನ್ನು 9 ನಿಮಿಷಗಳ ಕಾಲ ಸ್ವಿಚ್ ಆಫ್ ಮಾಡಿ ಮತ್ತು ಮೇಣದ ಬತ್ತಿ, ದೀಪ ಅಥವಾ ಮೊಬೈಲ್‍ನ ಬ್ಯಾಟರಿ ದೀಪವನ್ನು ಬೆಳಗಿಸಬೇಕೆಂದು ಎಲ್ಲರಿಗೂ ಮನವಿ ಮಾಡಿದ್ದರು. ಅದರಂತೆ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ, ವಿವಿಧ ಸಂಸದರು, ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಹಾಗೂ ಜನ ಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
Advertisement
#WATCH: Members of High Commission of India in Pakistan lit the lamps. PM Narendra Modi had appealed to all to switch off all lights of houses today at 9 PM for 9 minutes & just light a candle, 'diya' or mobile's flashlight, to mark fight against #COVID pic.twitter.com/SRgXuTD98a
— ANI (@ANI) April 5, 2020
Advertisement
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪವನ್ನು ಬೆಳಗಿಸಿದ್ದಾರೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ರಾತ್ರಿ 9 ಗಂಟೆಗೆ ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಸಾಮೂಹಿಕ ಒಗ್ಗಟ್ಟು ಮತ್ತು ಸಕಾರಾತ್ಮಕತೆಯನ್ನು ಪ್ರದರ್ಶಿಸುವಲ್ಲಿ ನಾಗರಿಕರೊಂದಿಗೆ ಸೇರಿಕೊಂಡರು.
Advertisement
Chhattisgarh: 44th Battalion of Indo-Tibetan Border Police personnel in Rajnandgaon lit earthen lamps and candles at 9 pm today. PM Narendra Modi had appealed to all to switch off all lights today at 9 PM for 9 minutes & just light candles/diyas, to mark fight against #COVID19 pic.twitter.com/u6ezmjdWU2
— ANI (@ANI) April 5, 2020
Advertisement
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪಗಳನ್ನು ಬೆಳಗಿಸಿದರು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಅರ್ಜುನ್ ರಾಂಪಾಲ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ರಜನಿಕಾಂತ್, ಆಲಿಯಾ ಭಟ್, ಕೃತಿ ಸನೋನ್ ಮತ್ತು ರವೀನಾ ಟಂಡನ್ ಸೇರಿದಂತೆ ಅನೇಕರು ತಮ್ಮ ಮನೆಗಳಲ್ಲಿ ಮೇಣದಬತ್ತಿಗಳನ್ನು ಹಚ್ಚಿದರು.
Gujarat: Mother of PM Modi, Heeraben, lights an earthen lamp after turning off all lights at her residence. India switched off all the lights for 9 minutes at 9 PM today & just lit a candle, 'diya', or flashlight, to mark India's fight against #Coronavirus as per PM's appeal. pic.twitter.com/qPQqXAB6Jf
— ANI (@ANI) April 5, 2020