ಬ್ಯಾಂಕಾಕ್: ಬಿಮ್‌ಸ್ಟೆಕ್ (BIMSTEC) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಬ್ಯಾಂಕಾಕ್‌ಗೆ ಆಗಮಿಸಿದ್ದು, ಮೋದಿಯವರನ್ನು ಅನಿವಾಸಿ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು.
ಇದಕ್ಕೂ ಮುನ್ನ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಥಾಯ್ಲೆಂಡ್ (Thailand) ಉಪ ಪ್ರಧಾನಿ ಪ್ರಸೆರ್ಟ್ ಜಂತರರು ವಾಂಗ್ಟಾಂಗ್ ಮತ್ತು ಇತರ ಹಲವು ಉನ್ನತಾಧಿಕಾರಿಗಳು ಸ್ವಾಗತ ಕೋರಿದರು. ಬ್ಯಾಂಕಾಕ್‌ಗೆ ಭೇಟಿ ನೀಡಿದ ಮೋದಿ, ಥಾಯ್ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದರು. ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ ‘ರಾಮಕಿಯೆನ್’ ಅನ್ನು ವೀಕ್ಷಿಸಿದರು. ಇದನ್ನೂ ಓದಿ: ಕೊಪ್ಪಳದಲ್ಲೊಂದು ಅಂತಾರಾಷ್ಟ್ರೀಯ ಮದುವೆ – ಲಂಡನ್ ಯುವತಿಗೆ ಗಂಗಾವತಿ ಗಂಡ!
A cultural connect like no other!
Witnessed a captivating performance of the Thai Ramayana, Ramakien. It was a truly enriching experience that beautifully showcased the shared cultural and civilisational ties between India and Thailand.
The Ramayana truly continues to connect… pic.twitter.com/wCoea0xCo1
— Narendra Modi (@narendramodi) April 3, 2025
ಬ್ಯಾಂಕಾಕ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಥೈಯ್ಲೆಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ (Paetongtarn Shinawatra) ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಭಾರತದ `ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದಲ್ಲಿ ಥೈಲ್ಯಾಂಡ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ನಾವು ಭಾರತ-ಥೈಲ್ಯಾಂಡ್ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಬಿರಿಪೋರ್ಟ್‌ಗೆ ಇಡಿ ಆಕ್ಷೇಪ – ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿಕೆ
Grateful for the warm welcome by the Indian community in Bangkok.
India and Thailand share a deep-rooted cultural bond that continues to flourish through our people. Heartening to see this connection reflected so strongly here. pic.twitter.com/sQTVUlDG3F
— Narendra Modi (@narendramodi) April 3, 2025
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಥೈಲ್ಯಾಂಡ್‌ನ ಶತಮಾನಗಳಷ್ಟು ಹಳೆಯ ಸಂಬಂಧಗಳು ನಮ್ಮ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳ ಮೂಲಕ ಸಂಪರ್ಕ ಹೊಂದಿವೆ. ಬೌದ್ಧ ಧರ್ಮದ ಹರಡುವಿಕೆಯು ನಮ್ಮ ಜನರನ್ನು ಸಂಪರ್ಕಿಸಿದೆ. ಆಯುತಾಯದಿಂದ ನಳಂದದವರೆಗೆ ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಒಂದು ಭಾಗವಾಗಿದೆ ಎಂದರು. ಇದನ್ನೂ ಓದಿ: 70 ಜನರನ್ನು ಕೆಲಸದಿಂದ ತೆಗೆದು – 67 ಮಂದಿಗೆ ಬೇರೆ ಕಡೆ ಕೆಲಸ ಸಿಗಲು ಸಹಾಯ ಮಾಡಿದ ಬೆಂಗ್ಳೂರು ಕಂಪನಿ ಸಿಇಒ!
ಸಂಸ್ಕೃತ ಮತ್ತು ಪಾಲಿ ಭಾಷೆಯ ಪ್ರಭಾವ ಇಂದಿಗೂ ಭಾಷೆ ಮತ್ತು ಸಂಪ್ರದಾಯಗಳಲ್ಲಿ ಪ್ರತಿಫಲಿಸುತ್ತದೆ. ನನ್ನ ಭೇಟಿಯ ಸಮಯದಲ್ಲಿ 18ನೇ ಶತಮಾನದ ರಾಮಾಯಣ ಭಿತ್ತಿಚಿತ್ರಗಳನ್ನು ಆಧರಿಸಿದ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ನಾನು ಥೈಲ್ಯಾಂಡ್ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ಲೆಂಡ್ ಪ್ರಧಾನಿ ‘ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್’ ಅನ್ನು ಉಡುಗೊರೆಯಾಗಿ ನೀಡಿದರು. ಇದನ್ನೂ ಓದಿ: ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ