ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನಲೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷದ ಹೈಕಮಾಂಡ್ ಫುಲ್ ಅಲರ್ಟ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರಲ್ಲಿ ಹುರುಪು ತುಂಬಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 50 ಲಕ್ಷ ಕಾರ್ಯಕರ್ತರೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂವಾದ ನಡೆಸಿದರು.
Advertisement
ಚುನಾವಣೆ ಹೊತ್ತಿನಲ್ಲಿ ಕಾರ್ಯಕರ್ತರು ಮಾಡಬೇಕಾದ ಕೆಲಸಗಳ ಬಗ್ಗೆ ಮೋದಿ ಅನೇಕ ಸಲಹೆಗಳನ್ನು ನೀಡಿದರು. ಸರ್ಕಾರದ ಯೋಜನೆಗಳನ್ನು ಜನರ ಬಳಿ ಕೊಂಡೊಯ್ಯುವಂತೆ ಕರೆ ನೀಡಿದರು. ಪಕ್ಷದ ನೀತಿ, ನಿರೂಪಣೆ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆಯೂ ತಿಳಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ
Advertisement
Advertisement
ಮೋದಿ ನೀಡಿದ ಸಂದೇಶಗಳೇನು?
ಬಿಜೆಪಿಗೆ ಬಹುಮತ ಬರಲು ಶ್ರಮಿಸಿ ಹಾಗೂ ಬಹುಮತ ಸರ್ಕಾರದ ಮಹತ್ವ ಮತದಾರರಿಗೆ ಅರ್ಥ ಮಾಡಿಸಿ. ಬಿಜೆಪಿಗೆ ಮತ ಹಾಕುವುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಏನೇನು ಲಾಭವಿದೆ ಎಂದು ಮನವರಿಕೆ ಮಾಡಿ. ಪ್ರತಿಯೊಂದು ಬೂತ್ನ ಜನರ ಜತೆ ವೈಯಕ್ತಿಕವಾಗಿ ಮಾತಾಡಿ, ಅವರ ಮನಸ್ಸು ಗೆಲ್ಲಿ. ಜನರ ಜತೆ ಹೆಚ್ಚು ಬೆರೆಯುವುದರಿಂದ ಅವರಿಗೆ ಬಿಜೆಪಿ ಕೆಲಸಗಳನ್ನು ಮನವರಿಕೆ ಮಾಡೋದ್ರಿಂದ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು.
Advertisement
ಡಬಲ್ ಎಂಜಿನ್ ಸರ್ಕಾರದ ಮಹತ್ವ ತಿಳಿಸಿ. ಡಬಲ್ ಎಂಜಿನ್ ಸರ್ಕಾರದಿಂದಲೇ ಕರ್ನಾಟಕದ ಅಭಿವೃದ್ಧಿ ಎಂಬುದನ್ನು ಮನವರಿಕೆ ಮಾಡಿ. 2014 ರ ಬಳಿಕ ದೇಶ, ರಾಜ್ಯದಲ್ಲಿ ಆದ ಗಮನಾರ್ಹ ಬದಲಾವಣೆ, ಅಭಿವೃದ್ಧಿ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿ. ಯುಪಿಎ ಸಂದರ್ಭದಲ್ಲಿ ವಿಳಂಬ ಅಭಿವೃದ್ಧಿ, ಈಗ ವಿಕಾಸ ವೇಗಗತಿಯಲ್ಲಿ ಸಾಗ್ತಿದೆ ಅಂತ ತಿಳಿ ಹೇಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ