ರಾಯ್ಪುರ: ಅಯೋಧ್ಯೆ ರಾಮಮಂದಿರದ (Ayodhya RamaMandir) ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. ಮೊನ್ನೆಯಷ್ಟೇ ಕಮಲ್‍ನಾಥ್ ಮಾತಾಡ್ತಾ, ರಾಜೀವ್ ಗಾಂಧಿಗೂ ಇದರ ಕ್ರೆಡಿಟ್ ಕೊಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ನಾವೇ ಕ್ರೆಡಿಟ್ ತಗೋತಿಲ್ಲ ಅಂತಾ ಅಮಿತ್ ಶಾ (AmitShah) ಹೇಳಿದ್ದರು. ಈ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ನನ್ನಿಂದಾಗಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಛತ್ತೀಸ್‍ಘಡದ ಬಿಶ್ರಮ್‍ಪುರ ರ‍್ಯಾಲಿಯಲ್ಲಿ ಮೋದಿ ಈ ಮಾತನ್ನು ಹೇಳಿದ್ದಾರೆ. ವಾಜಪೇಯಿ ಅವರ ಕಾಲದಲ್ಲಿ ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಈಗ ಮತ್ತೆ ಇಲ್ಲಿನ ಜನ ಬಿಜೆಪಿ ಸರ್ಕಾರ (BJP Govt) ಬರಬೇಕು ಎಂದು ಹೇಳುತ್ತಿದ್ದಾರೆ ಅಂತ ಮೋದಿ ಹೇಳಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಕಾಂಗ್ರೆಸ್ ಚಿಂತನೆ
#WATCH | Chhattisgarh: At a public meeting in Bishrampur, Surajpur, PM Modi says "Congress has given nothing but betrayal to all of you. Congress did not even fulfil the dreams of the youth of Chhattisgarh. They even did a scam in the name of 'Mahadev'. 'Mahadev' betting scam is… pic.twitter.com/DS9FeMASWi
— ANI (@ANI) November 7, 2023
ಸ್ವಾತಂತ್ರ್ಯ ಬಂದಾಗಿನಿಂದ ಆದಿವಾಸಿಗಳು ಕಾಂಗ್ರೆಸ್ ಕಣ್ಣಿಗೆ ಬಿದ್ದಿರಲಿಲ್ಲ. ನಿಮ್ಮ ಮತ್ತು ನಿಮ್ಮ ಮಕ್ಕಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಆದರೆ ಆದಿವಾಸಿಗಳ ಅಭಿವೃದ್ಧಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡುತ್ತದೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಬಹುದೆಂದು ನೀವು ಎಂದಾದರೂ ಊಹಿಸಿದ್ದಿರೇ ಎಂದು ಇದೇ ವೇಳೆ ಪ್ರಧಾನಿ (PM Narendra Modi) ಸಾರ್ವಜನಿಕರಲ್ಲಿ ಕೇಳಿದರು.
ನಕ್ಸಲರ ಹಾವಳಿ, ಭಯೋತ್ಪಾದನೆ ಹಾಗೂ ಇತ್ತೀಚಿನ ದಿನಗಳಲ್ಲಿ ಛತ್ತೀಸ್ ಗಢದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ತಡೆಯುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಮಾನವ ಕಳ್ಳಸಾಗಣೆ, ಮಾದಕ ವಸ್ತು ವ್ಯಾಪಾರ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕರ ಓಲೈಕೆ ರಾಜಕಾರಣದಿಂದಾಗಿ ಈ ಭಾಗದಲ್ಲಿ ಇಂದು ಹಬ್ಬಗಳ ಆಚರಣೆಯೂ ಕಷ್ಟಕರವಾಗಿದೆ ಎಂದು ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.