ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು 69ನೇ ವಸಂತಕ್ಕೆ ಕಾಲಿಟ್ಟಿದ್ದು ಸಂತಸದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಜನ್ಮದಿನದ ಖುಷಿಯಲ್ಲಿರುವ ಮೋದಿ ಅವರು ಇಂದು ಗುಜರಾತ್‍ಗೆ ತೆರಳಿ, ತಾಯಿಯ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಗಾಂಧಿನಗರದಿಂದ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ನರ್ಮದಾ ನದಿ ತೀರದಲ್ಲಿರುವ ಏಕತಾ ಪ್ರತಿಮೆ ಹಾಗೂ ಸರ್ದಾರ ಸರೋವರ್ ಡ್ಯಾಂ ಯೋಜನೆ, ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ.
ಈ ಪ್ರವಾಸದಲ್ಲಿ ಮೋದಿ ಅವರು ನರ್ಮದಾ ನದಿಗೆ ಪೂಜೆ ಸಲ್ಲಿಸಲ್ಲಿದ್ದಾರೆ. ಜೊತೆಗೆ ಸರ್ದಾರ್ ಸರೋವರ ಡ್ಯಾಂ ನಿಯಂತ್ರಣ ಕೊಠಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಕೆವಡಿಯಾದಲ್ಲಿ ಸಾರ್ವಜನಿಕರ ಜೊತೆ ಸಭೆ ನಡೆಸಲಿದ್ದಾರೆ.
ಕೇಂದ್ರ ಸಚಿವರು ಹಾಗೂ ಹಿರಿಯ ಬಿಜೆಪಿ ನಾಯಕರು ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. ಜೊತೆಗೆ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ತಮನ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸುತ್ತಿದ್ದಾರೆ. ಅದರಲ್ಲೂ ಟ್ವಿಟ್ಟರ್‌ನಲ್ಲಿ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಬಳಸುತ್ತಿರುವ ಹ್ಯಾಷ್‍ಟ್ಯಾಗ್‍ಗಳು ಮೈಕ್ರೊ ಬ್ಲಾಗ್ಗಿಂಗ್ ಸೈಟ್‍ನಲ್ಲಿ ಟಾಪ್ 10ರ ಪಟ್ಟಿಯಲ್ಲಿ ಇದೆ.
Delhi: BJP workers led by party MP Manoj Tiwari celebrated Prime Minister Narendra Modi's birthday at India Gate. pic.twitter.com/wfxEh6dJcH
— ANI (@ANI) September 16, 2019