ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಡೆಸಿದ ಸುದ್ದಿಗೋಷ್ಠಿಯು ಟ್ವಿಟರ್ ನಲ್ಲಿ ಭಾರೀ ಟ್ರೋಲ್ ಆಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಂಸದೆ ರಮ್ಯಾ, ವಕೀಲ್ ವಂದುಮುರುಗನ್ ಸೇರಿದಂತೆ ಅನೇಕರು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ದೆಹಲಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರೆದಿದ್ದ ಸುದ್ದಿಗೋಷ್ಠಿಗೆ ಜಂಟಿಯಾಗಿ ಭಾಗಿಯಾಗಿದರು.
Advertisement
LIVE: Shri @AmitShah is addressing a press conference in the presence of PM Shri @narendramodi at BJP HQ. #DeshKaGauravModi https://t.co/PyeR1mudj9
— BJP (@BJP4India) May 17, 2019
Advertisement
ನಗುಮೊಗದಿಂದಲೇ ಮಾತು ಆರಂಭಿಸಿದ ಪ್ರಧಾನಿ ಮೋದಿಯವರು, ಭಾರತ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಐದು ವರ್ಷ ನನಗೆ ಆಶೀರ್ವಾದ ನೀಡಿದ್ದೀರಿ. ಐದು ವರ್ಷದ ಸಾಧನೆ ತೃಪ್ತಿಯಿದೆ. ಕೆಲವು ವಿಚಾರವನ್ನು ಹೆಮ್ಮೆಯಿಂದ ಹೇಳಬೇಕು. ಇಡೀ ವಿಶ್ವದ ಗಮನ ಸೆಳೆದಿದ್ದೇವೆ ಎಂದರು.
Advertisement
ಐದು ವರ್ಷದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಗುವಂತೆ ಮಾಡಿದ್ದೇವೆ. 2014ರ ಮೇ 17ರಂದೇ ಪ್ರಾಮಾಣಿಕತೆ ಯುಗ ಆರಂಭವಾಗಿತ್ತು. 2014ರಲ್ಲಿ ಐಪಿಎಲ್‍ನ್ನು ಎತ್ತಂಗಡಿ ಮಾಡಲಾಗಿತ್ತು. ಈ ಬಾರಿ ಚುನಾವಣೆ, ಪರೀಕ್ಷೆಗಳು, ಹಬ್ಬಗಳು ಹೀಗೆ ಒಟ್ಟಾಗಿ ನಡೆದಿವೆ. ಸಕಾರಾತ್ಮಕ ಭಾವನೆಯಿಂದ ಚುನಾವಣೆಗೆ ಬಂದಿದ್ದೇವೆ. ಪೂರ್ಣ ಬಹುಮತದೊಂದಿಗೆ ವಾಪಸ್ ಬರುತ್ತೇವೆ ಎಂದು ನಗು ನಗುತ್ತಲೇ ಮಾತು ಮುಗಿಸಿದರು.
Advertisement
5 ವರ್ಷದಲ್ಲಿ ಮೊದಲ ಬಾರಿಗೆ ಮೋದಿ ಸುದ್ದಿಗೋಷ್ಠಿಗೆ ಆಗಮಿಸಿದ್ದರೂ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಿಲ್ಲ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿಸ್ತಿನ ನೆಪವೊಡ್ಡಿ, ಪಕ್ಷದ ಅಧ್ಯಕ್ಷರು ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ಬಳಿಕ ಅಮಿತ್ ಶಾ ಅವರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದರು.
ನೆಟ್ಟಿಗರಿಂದ ಟ್ರೋಲ್
ಮೋದಿ ಅವರಿಗೆ ಶುಭಾಶಯಗಳು. ಅತ್ಯುತ್ತಮ ಸುದ್ದಿಗೋಷ್ಠಿ! ಸುದ್ದಿಗೋಷ್ಠಿ ಎದುರಿಸಿದ್ದು ಉತ್ತಮ ಪ್ರಯತ್ನ. ಮುಂದಿನ ಬಾರಿಯಾದರೂ ಅಮಿತ್ ಶಾ ಅವರು ನಿಮಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಬಹುದು. ವೆಲ್‍ಡನ್! ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಕಾಲೇಳೆದಿದ್ದಾರೆ.
Congratulations Modi Ji. Excellent Press Conference! Showing up is half the battle. Next time Mr Shah may even allow you to answer a couple of questions. Well done! ????
— Rahul Gandhi (@RahulGandhi) May 17, 2019
ಮಾಜಿ ಸಂಸದೆ ರಮ್ಯಾ ಅವರು, ಇದು ಯಾರ ಸುದ್ದಿಗೋಷ್ಠಿ..? ಪ್ರಧಾನಿ ಯಾರು..? ಅಮಿತ್ ಶಾ ಅವರಾ ಅಥವಾ ನರೇಂದ್ರ ಮೋದಿ ಅವರಾ! ವ್ಯರ್ಥ ಮಾಧ್ಯಮಗೋಷ್ಠಿ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಪತ್ರಿಕಾಗೋಷ್ಠಿ ಮತ್ತು ಮನ್‍ಕಿ ಬಾತ್ ನಡುವೆ ಗೊಂದಲ ಉಂಟಾಗಿದೆ ಎಂದು ಫ್ಯಾಕ್ಟ್‍ಚೆಕ್ ವೆಬ್‍ಸೈಟ್ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ವ್ಯಂಗ್ಯವಾಡಿದ್ದಾರೆ.
Who’s press conference was it? Who’s the PM? @AmitShah or @narendramodi! What a waste of a press conference
— Ramya/Divya Spandana (@divyaspandana) May 17, 2019
ಸುದ್ದಿಗೋಷ್ಠಿ ಇತಿಹಾಸದಲ್ಲಿ ಇದು ಅತ್ಯುತ್ತಮ ಸುದ್ದಿಗೋಷ್ಠಿ ಎಂದು ವಕೀಲ್ ವಂದುಮುರುಗನ್ ಲೇವಡಿ ಮಾಡಿದ್ದಾರೆ. ಮೈಥಿಲಿ ಸರಣ್ ಅವರು, ಮೋದಿ ಅವರು ಕೇವಲ ಸ್ಟ್ರೆಸ್ ಕಾನ್ಫರೆನ್ಸ್ ನಡೆಸಿದರು ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್: ಸಿದ್ಧಪಡಿಸಿಟ್ಟ ಪ್ರಶ್ನೆ/ ಉತ್ತರ ಪ್ರತಿಗಳನ್ನು ಯಾರೋ ಜಾಗ ಬದಲಿಸಿಟ್ಟಿದ್ದಾರೆ. ಆದ್ದರಿಂದ ಪ್ರಧಾನಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ದೇಶ್‍ಭಕ್ತ್ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಗಾಗಿ ಥ್ಯಾಂಕ್ಯೂ ಮನ್‍ಮೋದಿ ಜೀ ಎಂದು ಯೂತ್ ಅಗೆನೆಸ್ಟ್ ಹೇಟ್ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.
Modiji got confused between press conference and mann ki baat.
— Pratik Sinha (@free_thinker) May 17, 2019
https://twitter.com/akashbanerjee/status/1129362519448084482