ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಜೊತೆಯಾಗಿ ಔರಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಶೃಂಗಸಭೆ (SCO Summit) ನಡೆದ ಸ್ಥಳದಿಂದ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ಪ್ರಯಾಣದ ಫೋಟೋವನ್ನು ಎಕ್ಸ್‌ನಲ್ಲಿ ಪ್ರಕಟಿಸಿದ ಮೋದಿ, ಶೃಂಗಸಭೆಯ ನಡೆದ ಸ್ಥಳದಿಂದ ನಮ್ಮ ದ್ವಿಪಕ್ಷೀಯ ಸಭೆ ನಡೆಯುವ ಜಾಗಕ್ಕೆ ಒಟ್ಟಿಗೆ ಪ್ರಯಾಣಿಸಿದೆವು. ಪುಟಿನ್ ಜೊತೆಗಿನ ಸಂಭಾಷಣೆಗಳು ಯಾವಾಗಲೂ ಒಳನೋಟದಿಂದ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನ ಓದಿ:ಪುಟಿನ್, ಮೋದಿ, ಜಿನ್‌ಪಿಂಗ್ ಮಾತುಕತೆ– Video Of The Dayಎಂದ ರಷ್ಯಾ
After the proceedings at the SCO Summit venue, President Putin and I travelled together to the venue of our bilateral meeting. Conversations with him are always insightful. pic.twitter.com/oYZVGDLxtc
— Narendra Modi (@narendramodi) September 1, 2025
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ಬಳಸುತ್ತಿದ್ದಾರೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ. ಇದನ್ನೂ ಓದಿ:ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರುಶ್ರೀಮಂತರಾಗುತ್ತಿದ್ದಾರೆ:ಭಾರತದ ವಿರುದ್ಧ ಟ್ರಂಪ್‌ಆಪ್ತನಿಂದ ಜಾತಿ ಅಸ್ತ್ರ
ಪುಟಿನ್ ಮತ್ತು ಮೋದಿ ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬ್ರಿಕ್ಸ್ ಶೃಂಗಸಭೆ ಮೋದಿ ರಷ್ಯಾಗೆ ಭೇಟಿ ನೀಡಿದಾಗಲೂ ಇಬ್ಬರು ನಾಯಕರು ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸಿದ್ದರು. ಇದನ್ನೂ ಓದಿ:ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ಮೆಚ್ಚಿನ ಕಾರು ನೀಡಿದ ಚೀನಾ!
ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ ಒತ್ತಡ ಹಾಕುತ್ತಿದ್ದರೂ ಭಾರತ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ರಂಪ್ ಭಾರತ ಮತ್ತು ರಷ್ಯಾದ ಆರ್ಥಿಕತೆಯನ್ನು ಡೆಡ್ ಎಕಾನಮಿ ಎಂದು ಜರೆದಿದ್ದರು. ನಂತರ ರಷ್ಯಾದಿಂದ ತೈಲ ಖರೀದಿಸಿ ವಿಶ್ವಕ್ಕೆ ಮಾರಾಟ ಮಾಡುತ್ತಿರುವುದಕ್ಕೆ ಭಾರತದ ವಸ್ತುಗಳಿಗೆ ದಂಡದ ರೂಪದಲ್ಲಿ 25% ತೆರಿಗೆ ವಿಧಿಸಿದ್ದಾರೆ.