– 135 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಜೆಗಳು ಯೋಗಾಭ್ಯಾಸದಲ್ಲಿ ಭಾಗಿ
ನ್ಯೂಯಾರ್ಕ್: ವಿಶ್ವ ಯೋಗ ದಿನದ (International Yoga Day 2023) ಅಂಗವಾಗಿ ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಯೋಗಾಭ್ಯಾಸದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರಗಳ ಜನರು ಭಾಗವಹಿಸಿ, ಗಿನ್ನಿಸ್ ದಾಖಲೆ ಬರೆದರು.
Advertisement
ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ
Advertisement
Advertisement
ಮೊದಲಿಗೆ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೋದಿ ಬಳಿಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಮೋದಿ ಆಗಮಿಸುತ್ತಿದ್ದಂತೆ ಅಮೆರಿಕದಲ್ಲೂ `ಮೋದಿ.. ಮೋದಿ’ ಜಯಘೋಷ ಮೊಳಗಿತು. ವಸುದೈವ ಕುಟುಂಬಕಂ ಘೋಷದೊಂದಿಗೆ ನಡೆದ ಮೋದಿಯ ಯೋಗ ಯಾಗಕ್ಕೆ ವಿಶ್ವದ 135 ಕ್ಕೂ ಹೆಚ್ಚು ದೇಶಗಳ ಗಣ್ಯರು ಸಾಕ್ಷಿಯಾದರು.
Advertisement
ಸಾವಿರಾರು ಜನರ ಜೊತೆ ಪ್ರಧಾನಿ ಮೋದಿ ಪ್ರಾಣಾಯಾಮ, ಓಂಕಾರ, ಧ್ಯಾನ ಮತ್ತು ಸಂಕಲ್ಪ ಆ ಬಳಿಕ ಕಪಾಲಬಾತಿ, ಷಣ್ಮುಖ ಮುದ್ರೆ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿದರು. ಯೋಗಾಸನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಯೋಗ ಭಾರತದ ಪರಂಪರೆ ಸಾರುತ್ತದೆ. ಯೋಗದಿಂದ ಇಡೀ ವಿಶ್ವವೇ ಒಗ್ಗೂಡಿದೆ. ಯೋಗ ಎಂದರೆ ಏಕತೆ. ಎಲ್ಲರನ್ನು ಒಗ್ಗೂಡಿಸುತ್ತೆ. ಯೋಗದ ಮೂಲಕ ಇಡೀ ವಿಶ್ವವೇ ಹತ್ತಿರವಾಗುತ್ತಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣದಿಂದ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ: ಸಿಎಂ
ಯೋಗ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ದೇಶಗಳ ಪ್ರಜೆಗಳು ಭಾಗಿಯಾಗಿದ್ದಕ್ಕೆ ಗಿನ್ನಿಸ್ ರೆಕಾರ್ಡ್ ಆಗಿದೆ. ಯೋಗ ಮಹತ್ವ ಸಾರುತ್ತಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೆನಿಯೋ ಗುಟಾರೆಸ್ ಶ್ಲಾಘಿಸಿದ್ದಾರೆ.